BREAKING: ಕನ್ನಡ ಬಿಗ್ ಬಾಸ್ ಗೆ ಬಿಗ್ ಶಾಕ್: ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿದ ಅಧಿಕಾರಿಗಳು

ಪ್ರಗತಿವಾಹಿನಿ ಸುದ್ದಿ: ಕನ್ನಡ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಪಡೆದಿದ್ದ ಬಿಗ್ ಬಾಸ್ ಕನ್ನಡ ಸೀಜನ್ 12ಕ್ಕೆ ಬಿಗ್ ಶಾಕ್ ಎದುರಾಗಿದೆ. ಕಾರ್ಯಕ್ರಮ ಸ್ಥಗಿತಗೊಂಡಿದೆ. ಬಿಗ್ ಬಾಸ್ ಸೀಜನ್-12 ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ಬಿಡದಿ ಕೈಗಾರಿಕಾ ಪ್ರದೇಶದ 35 ಎಕರೆಯಲ್ಲಿದ್ದ ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್ ಬಾಸ್ ಶೋ ಕಾರ್ಯಕ್ರಮ ನಡೆಯುತ್ತಿತ್ತು. ಆದರೆ ಜಾಲಿವುಡ್ ಸ್ಟುಡಿಯೋ ಹಾಗೂ ಬಿಗ್ ಬಾಸ್ ಟೀಂ ಮಾಲಿನ್ಯ ನಿಯಂತ್ರಣ ನಿಯಮ ಹಾಗೂ ಪರಿಸರ ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್ ನೀಡಲು ಹೋದ ಅದಿಅಕರಿಗಳಿಂದ ನೋಟಿಸ್ ಪಡೆಯಲಿ ಜಾಲಿವುಡ್ ಸ್ಟುಡಿಯೋಸ್ ಹಾಗೂ ಬಿಗ್ ಬಾಸ್ ಟಿಂ ಹಿಂದೇಟು ಹಾಕಿತ್ತು.
ಇದೇ ವೇಳೆ ಬಿಗ್ ಬಾಸ್ ಶೋ ನಡೆಸಲು ಜಾಲಿವುಡ್ ಸ್ಟುಡಿಯೋಸ್ ಪೊಲೀಸರಿಂದ ಅನುಮತಿ ಪಡೆದಿರಲಿಲ್ಲ ಎಂಬುದು ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು, ತಹಶೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳು ಜಾಲಿವುಡ್ ಸ್ಟುಡುಯೋ ಹಾಗೂ ಬಿಗ್ ಬಾಸ್ ಹೌಸ್ ಗೆ ತೆರಳಿ ಸ್ಟುಡಿಯೋಗೆ ಬೀಗ ಜಡಿದಿದ್ದಾರೆ. ಬಿಗ್ ಬಾಸ್ ಹೌಸ್ ನಲ್ಲಿದ್ದ ಎಲ್ಲಾ ಸ್ಪರ್ಧಿಗಳನ್ನು, ಸಿಬ್ಬಂದಿಗಳನ್ನು ಮನೆಯಿಂದ ಹೊರಕಳುಹಿಸಲಾಗಿದೆ.