
ಪ್ರಗತಿವಾಹಿನಿ ಸುದ್ದಿ: ಹಿಮಾಚಲ ಪ್ರದೇಶದ ಬಿಲಾಸ್ಪುರ ಜಿಲ್ಲೆಯಲ್ಲಿ ಭೀಕರ ಭೂಕುಸಿತವುಂಟಾಗಿದ್ದು ಝಂಡುತಾ ಪ್ರದೇಶದಲ್ಲಿ ಪ್ರಯಾಣಿಕರ ಬಸ್ ಭೂಕುಸಿತಕ್ಕೆ ಸಿಲುಕಿದೆ. ಪರಿಣಾಮ 18 ಜನರು ಮೃತಪಟ್ಟಿದ್ದಾರೆ.
ಬಸ್ ನಲ್ಲಿ 30ಕ್ಕೂ ಹೆಚ್ಚು ಜನರು ಪ್ರಯಾಣಿಕರಿದ್ದರು. ಬಸ್ ಚಲಿಸುತ್ತಿದ್ದಾಗಲೇ ಭೂಕುಸಿತ ಸಂಭವಿಸಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿ18 ಜನರು ಸಾವನ್ನಪ್ಪಿದ್ದಾರೆ. ಬಂದೆಗಳು ಬಸ್ ನ ಮೇಲೆ ಬಿದ್ದಿದ್ದು, ಹಲವರು ಸಿಲುಕಿಕೊಂಡಿದ್ದಾರೆ. ರಕ್ಷಣಾಕಾರ್ಯಾಚರಣೆ ನಡೆಸಲಾಗಿದೆ.