
ಪ್ರಗತಿವಾಹಿನಿ ಸುದ್ದಿ: ಕೃ.ನರಹರಿ ಅವರ ನಿಧನ ವಾರ್ತೆ ತಿಳಿದು ಖೇದವಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಸಂತಾಪ ಸೂಚಿಸಿದ್ದಾರೆ.
ತಮ್ಮ 93 ವರ್ಷದ ಜೀವನದಲ್ಲಿ ಬಹುಶ: 80 ವರ್ಷಕ್ಕೂ ಹೆಚ್ಚು ಕಾಲ ದೇಶದ ಹಿತಕ್ಕೆ ಸಾಮಾಜಿಕ ಚಟುವಟಿಕೆಗಳಿಗೆ ಜೀವನವನ್ನು ಮೀಸಲಿರಿಸಿ ಪ್ರಾಮಾಣಿಕ ಹಾಗೂ ಆದರ್ಶಮಯ ಜೀವನ ನಡೆಸಿದ ನರಹರಿಯವರು ನಮ್ಮ ಗುರುಗಳಾದ ಪೇಜಾವರ ಶ್ರೀ ವಿಶ್ವೇಶತೀರ್ಥರಿಗೂ ಮತ್ತು ನಮಗೂ ಅತ್ಯಂತ ಪ್ರೀತಿ ಪಾತ್ರರಾಗಿದ್ದವರು. ಅವರ ಎಲ್ಲ ಚಟುವಟಿಕೆಗಳನ್ನು ನಾವು ಹತ್ತಿರದಿಂದ ಬಲ್ಲೆವು ಅವರ ಸಹೋದರ ಸಹೋದರಿ ಕೂಡಾ ದೇಶ ಸೇವೆಗೆ ಇಡೀ ಜೀವನವನ್ನೇ ಮುಡಿಪು ಇಟ್ಟವರು.
ಶೈಕ್ಷಣಿಕ ಕ್ಷೇತ್ರದಲ್ಲಿ ಇವರ ಸಾಧನೆ ಅಪ್ರತಿಮ ವಿಧಾನ ಪರಿಷತ್ ಸದಸ್ಯರಾಗಿ ಇವರು ಪ್ರತಿಪಾದಿಸಿದ ವಿಚಾರಗಳು ಸರ್ವ ವೇದ್ಯ. ಶ್ರೀ ಕೃಷ್ಣ ಮುಖ್ಯ ಪ್ರಾಣರು ಅವರಿಗೆ ಸದ್ಗತಿ ನೀಡಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ಹೇಳಿದ್ದಾರೆ.