CrimeKannada NewsKarnataka News
*ಮಾರ್ಕೋನಹಳ್ಳಿ ಡ್ಯಾಂ ನಲ್ಲಿ 6 ಜನ ಕೊಚ್ಚಿ ಹೋದ ಪ್ರಕರಣ: ನಾಲ್ಕು ವರ್ಷದ ಮಗುವಿನ ಶವ ಪತ್ತೆ*

ಪ್ರಗತಿವಾಹಿನಿ ಸುದ್ದಿ: ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಮಾರ್ಕೋನಹಳ್ಳಿ ಡ್ಯಾಂ ಬಳಿ ಮಂಗಳವಾರ ಸಂಜೆ ಈ ಘಟನೆ ನಡೆದಿತ್ತು. ಇಂದೂ ಸಹ ಮೃತ ದೇಹಗಳ ಶೋಧ ಕಾರ್ಯ ಮುಂದುವರಿದಿದ್ದು, ನಾಲ್ಕು ವರ್ಷದ ಬಾಲಕ ಶವ ಪತ್ತೆಯಾಗಿದೆ. ಉಳಿದ 3 ಮೃತ ದೇಹ ಪತ್ತೆಗೆ ಕಾರ್ಯಾಚರಣೆ ನಡೆದಿದೆ.
ತುಮಕೂರಿನ ಮಾರ್ಕೋನಹಳ್ಳಿ ಡ್ಯಾಂನ ಕೋಡಿ ನೀರಿನಲ್ಲಿ 6 ಮಂದಿ ಕೊಚ್ಚಿ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮೃತದೇಹ ಪತ್ತೆಯಾಗಿದೆ. ನಾಲ್ಕು ವರ್ಷದ ಮಗು ಮಿಫ್ರಾ ಮೃತ ದೇಹ ಪತ್ತೆಯಾಗಿದ್ದು ಕೋಡಿ ಹರಿಯುತ್ತಿದ್ದ ನದಿ ದಡದಲ್ಲಿ ಶವ ಸಿಕ್ಕಿದೆ.
ಅಗ್ನಿಶಾಮಕ ದಳ ಹಾಗೂ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿತ್ತು, ನಿನ್ನೆಯಿಂದಲೇ ನದಿ ದಡದ ಬಳಿ ಸಿಬ್ಬಂದಿ ಬೀಡು ಬಿಟ್ಟಿದ್ದಾರೆ. ಡ್ಯಾಂನ ಸ್ವಯಂ ಚಾಲಿತ ಗೇಟುಗಳು ಒಪನ್ ಆಗಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದ್ದು, ಘಟನೆ ಸಂಬಂಧ ಮಂಡ್ಯ ಜಿಲ್ಲೆ ನಾಗಮಂಗಲ ಗ್ರಾಮಾಂತರ ಪೊಲೀಸರಿಂದ ತನಿಖೆ ಮುಂದುವರೆದಿದೆ.