
ಪ್ರಗತಿವಾಹಿನಿ ಸುದ್ದಿ: ಖ್ಯಾತ ಕೇಶವಿನ್ಯಾಸಗಾರ ಜಾವೇದ್ ಹಬೀಬ್ ಹಾಗೂ ಆತನ ಪುತ್ರನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ಜಾವೇದ್ ಹಬೀಬ್ ಹಾಗೂ ಅವರ ಪುತ್ರ ಹೂಡಿಕೆ ಯೋಜನೆ ಮೂಲಕ 100ಕ್ಕೂ ಹೆಚ್ಚು ನಜರಿಗೆ ೫ರಿಂದ ೭ ಕೋಟಿ ವಂಚನೆ ಮಾಅಡಿದ್ದಾರೆ ಎಂದು ಉತ್ತರ ಪ್ರದೇಶದ ಸಂಭಾಲ್ ನಗರದ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾವೇದ್ ಹಬೀಬ್ ಹಾಗೂ ಅವರ ಪತ್ರ ಸೇರಿದಂತೆ ಮೂವರ ವಿರುದ್ಧ 20ಕ್ಕೂ ಹೆಚ್ಚು ವಂಚನೆ ಪ್ರಕರಣ ದಾಖಲಾಗಿದ್ದು, ಇಡೀ ಕುಟುಂಬಕ್ಕೆ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.
ಪ್ರಕರಣ ಸಂಬಂಧ ಜಾವೇದ್ ಹಬೀಬ್ ಪತ್ನಿ ಕಂಪನಿ ಸಂಸ್ಥಾಪಕಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವರೆಗೆ ಜಾವೇದ್ ಹಬೀಬ್ ಹಾಗೂ ಅವರ ಪುತ್ರನ ಬಂಧನವಾಗಿಲ್ಲ ಎಂದು ತಿಳಿದುಬಂದಿದೆ.