Kannada NewsKarnataka NewsLatest
*BREAKING: ಡೆತ್ ನೋಟ್ ಬರೆದಿಟ್ಟು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ನವವಿವಾಹಿತೆ*

ಪ್ರಗತಿವಾಹಿನಿ ಸುದ್ದಿ: 6 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಇಲ್ಲಿನ ಗುಡಿಬಂಡೆ ತಾಲೂಕಿನ ಕೊಂದಾವಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 25 ವರ್ಷದ ಕೆ.ಎನ್.ಜಯಶ್ರೀ ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ. 6 ತಿಂಗಳ ಹಿಂದಷ್ಟೇ ಜಯಶ್ರೀಯನ್ನು ಶಿಡ್ಲಘಟ್ಟ ಮೂಲದ ಚಂದ್ರಶೇಖರ್ ಎಂಬಾತನ ಜೊತೆ ವಿವಾಹಮಾಡಿಕೊಡಲಾಗುತ್ತು. ಆದರೆ ಪತಿ ಚಂದ್ರಶೇಖರ್ ಗೆ ಬೇರೊಂದು ಯುವತಿಯೊಂದಿಗೆ ಅಕ್ರಮ ಸಂಬಂಧವಿತ್ತು. ಮೊಬೈಲ್ ನಲ್ಲಿ ಯುವತಿ ಜೊತೆ ಯಾವಾಗಲೂ ಚಾಟಿಂಗ್ ಮಾಡುತ್ತಿದ್ದ. ಇದನ್ನು ಪತ್ನಿ ಪ್ರಶ್ನೆ ಮಾಡಿದ್ದಕ್ಕೆ ಪತ್ನಿಗೆ ಕಿರುಕುಳ ನೀಡುತ್ತಿದ್ದ.
ಪತಿ ವರ್ತನೆಯಿಂದ ಬೇಸತ್ತ ಜಯಶ್ರೀ ಡೆತ್ ನೋಟ್ ಬರೆದಿಟ್ಟು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.