
ಪ್ರಗತಿವಾಹಿನಿ ಸುದ್ದಿ: ಸರಸ್ವತಿ ಸಮ್ಮಾನ ಪುರಸ್ಕೃತ ಖ್ಯಾತ ಕಾದಂಬರಿಕಾರ ದಿ.ಡಾ.ಎಸ್.ಎಲ್.ಬೈರಪ್ಪ ನುಡಿ-ನಮನ ಕಾರ್ಯಕ್ರಮವನ್ನು ಬೆಳಗಾವಿಯ ಹಿಂದವಾಡಿ ಗುರುದೇವ ರಾನಡೆ ಮಂದಿರದಲ್ಲಿ ಏರ್ಪಡಿಸಲಾಗಿದೆ.
ಇಂದು (ಸೋಮವಾರ) ಸಂಜೆ 5:30ಕ್ಕೆ ಗುರುದೇವ ರಾನಡೆ ಎ.ಸಿ.ಪಿ.ಆರ್ ಸಭಾಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ, ಸಾಹಿತಿ ಡಾ.ಸರಜು ಕಾಟ್ಕರ್ ವಹಿಸಲಿದ್ದಾರೆ.
ಅತಿಥಿಗಳಾಗಿ ರಾಣಿ ಚನ್ನಮ್ಮ ವಿವಿ ಉಪಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ, ರಾಘವೇಂದ್ರ ಕಾಗವಾಡ, ಡಾ.ರಾಮಕೃಷ್ಣ ಮರಾಠೆ, ಗುಂಡೇನಕಟ್ಟಿ ಮಧುಕರ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ ಎಂದು ಎಸಿಪಿಆರ್ ಗೌರವ ಕಾರ್ಯದರ್ಶಿ ಎಂ.ಬಿ.ಜಿರಲಿ ಹಾಗೂ ಉಪಾಧ್ಯಕ್ಷ ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ.