
ಪ್ರಗತಿವಾಹಿನಿ ಸುದ್ದಿ: ಲಿವಿನ್ ರಿಲೇಶನ್ ಶಿಪ್ ನಲ್ಲಿದ್ದ ಜೋಡಿಯೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕಲ್ಲುಬಾಳು ಬಳಿ ನಡೆದಿದೆ.
ಮೃತರನ್ನು ಓಡಿಶಾ ಮೂಲದ ರಾಕೇಶ್ ಪಾತ್ರ ಹಾಗೂ ಸೀಮಾ ನಾಯ್ಕ್ ಎಂದು ಗುರುತಿಸಲಾಗಿದೆ. ಎರಡು ದಿನಗಳಿಂದ ಮನೆ ಬಾಗಿಲು ತೆರೆಯದ್ದನ್ನು ನೋಡಿದ ಅಕ್ಕಪಕ್ಕದ ನಿವಾಸಿಗಳು ಕಿಟಕಿ ಗಾಜು ಒಡೆದು ಪರಿಶೀಲಿಸಿದಾಗ ಯುವ ಜೋಡಿ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಯುವಕ ರಾಕೇಶ್ ಕುಡಿದು ಬಂದು ಪದೇ ಪದೇ ಗಲಾಟೆ ಮಾಡುತ್ತಿದ್ದ. ಹಣಕ್ಕಾಗಿ ಸೀಮಾಳನ್ನು ಪೀಡಿಸುತ್ತಿದ್ದ. ಭಾನುವಾರ ಕೂಡ ಸೀಮಾಳಿಗೆ ಹಣ ಕೊಡುವಂತೆ ಜಗಳವಾಡಿದ್ದ. ಸೀಮಾ ತನ್ನ ಬಳಿ ಹಣವಿಲ್ಲ ಎಂದು ಹಣ ಕೊಟ್ಟಿರಲಿಲ್ಲ. ಬೆಳಿಗ್ಗೆ ಎದು ನೋಡಿದರೆ ರಾಕೇಶ್ ನೇಣಿಗೆ ಕೊರಳೊಡ್ಡಿದ್ದಾನೆ. ಇದರಿಂದ ಆತಂಕಗೊಂಡ ಸೀಮಾ ಬೇರೆ ದಾರಿ ಕಾಣದೇ ತಾನೂ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ಜಿಗಣಿ ಪೊಲೀಸರು ತನಿಖೆ ನಡೆಸಿದ್ದಾರೆ.