CrimeKannada NewsKarnataka News

*ಪ್ರತ್ಯೇಕ ಪ್ರಕರಣ: ಛತ್ ಪೂಜೆ ವೇಳೆ ನೀರಿನಲ್ಲಿ ಮುಳುಗಿ 15 ಜನ ಸಾವು*

ಪ್ರಗತಿವಾಹಿನಿ ಸುದ್ದಿ: ಛತ್ ಪೂಜೆ ಆಚರಣೆಯ ವೇಳೆ ಸಂಭವಿಸಿದ ಹಲವು ದುರಂತಗಳಲ್ಲಿ, ಕನಿಷ್ಠ 15 ಜನರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.

ಜಾರ್ಖಂಡ್‌ನಲ್ಲಿ ಹಜಾರಿಬಾಗ್‌ನ ಕಟ್ಕಮ್‌ ಸಾಂಡಿಯ ಶಹಪು‌ರ್ ಪಂಚಾಯತ್‌ ವ್ಯಾಪ್ತಿಯ ಝಾರ್ದಗ್ ಗ್ರಾಮದಲ್ಲಿ ಅತ್ಯಂತ ಹೃದಯವಿದ್ರಾವಕ ಘಟನೆ ವರದಿಯಾಗಿದೆ. 

ಛತ್ ಪೂಜೆಯ ನಂತರ ಮಧ್ಯಾಹ್ನದ ವೇಳೆ ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ಹುಡುಗಿಯರು ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಹುಡುಗಿಯರಲ್ಲಿ ಒಬ್ಬಳು ಆಳವಾದ ಕೊಳಕ್ಕೆ ಬಿದ್ದಾಗ, ಆಕೆಯನ್ನು ಉಳಿಸಲು ಪ್ರಯತ್ನಿಸಿದ ಇತರ ಮೂವರು ಸಹ ಒಬ್ಬೊಬ್ಬರಾಗಿ ನೀರಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ರಿಂಕಿ ಕುಮಾರಿ (16), ಪೂಜಾ ಕುಮಾರಿ (20), ಸಾಕ್ಷಿ ಕುಮಾರಿ (16), ಮತ್ತು ರಿಯಾ ಕುಮಾರಿ (14) ಎಂದು ಗುರುತಿಸಲಾಗಿದೆ.

Home add -Advt

ಸೋಮವಾರ ಐದು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಇದು ಹಬ್ಬದ ಸಮಯದಲ್ಲಿ ನೀರುಪಾಲಾದವರ ಸಂಖ್ಯೆಯನ್ನು 15ಕ್ಕೆ ಏರಿಸಿದೆ.

ಹಜಾರಿಬಾಗ್‌ನ ಕೆರೇದಾರಿ ಪೊಲೀಸ್‌ ಠಾಣೆ ವ್ಯಾಪ್ತಿಯ ಬೇಲಾ ಗ್ರಾಮದ ಕೊಳದಲ್ಲಿ ಗುಂಗುನ್ ಕುಮಾರಿ (11) ಮತ್ತು ರೂಪಾ ತಿವಾರಿ (12) ಸಾವನ್ನಪ್ಪಿದ್ದಾರೆ.

ಇದೇ ಜಿಲ್ಲೆಯ ಡ್ಯಾನೋ ನದಿಯಲ್ಲಿ ಸ್ನಾನ ಮಾಡುವಾಗ 13 ವರ್ಷದ ರಾಹುಲ್ ಕುಮಾ‌ರ್ ಮುಳುಗಿ ಸಾವನ್ನಪ್ಪಿದ್ದಾನೆ. ಸಿಮ್ಮೆಗಾ ಜಿಲ್ಲೆಯ ಬಾನೋ ಪೊಲೀಸ್ ಠಾಣೆ ವ್ಯಾಪ್ತಿಯ ಮಾಯಾಂಗ್ಲೋರ್ ಗ್ರಾಮದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. 

ಎರಡೂವರೆ ವರ್ಷದ ಬಾಲಕಿ ಸೋಮವಾರ ತನ್ನ ಮನೆಯೊಳಗಿನ ಬಕೆಟ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. 

Related Articles

Back to top button