Belagavi NewsBelgaum NewsKannada NewsKarnataka NewsNationalPolitics

*ಕರ್ನಾಟಕಕ್ಕೆ ಇದಕ್ಕಿಂತ ದೊಡ್ಡ ಅವಮಾನ ಇದೆಯೇ?: ಸರ್ಕಾರದ ವಿರುದ್ಧ ಬಿಜೆಪಿ ಕಿಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವದ ಶುಭದಿನದಂದೇ, ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ಕರಾಳ ದಿನಾಚರಣೆ ಆಚರಿಸಿದ್ದಾರೆ. ಈ ವಿವಾದಾತ್ಮಕ ಘಟನೆಯ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಮಾಳಮಾರುತಿ ಪೊಲೀಸ್‌ ಠಾಣೆಯ ಸಿಪಿಐ ಜೆ.ಎಂ.ಕಾಲಿಮಿರ್ಚಿ ಎಂಬುವವರ ಸೆಲ್ಪಿ ತೆಗೆಸಿಕೊಂಡಿದ್ದರು. ಈ ಘಟನೆಯನ್ನು ಖಂಡಿಸಿರುವ ಬಿಜೆಪಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಈ ಕುರಿತಂತೆ ಬಿಜೆಪಿಯು ಟ್ವೀಟ್ ಮಾಡಿದ್ದು ಕರ್ನಾಟಕ ರಾಜ್ಯೋತ್ಸವದ ದಿನವೇ ಕನ್ನಡ ಹಾಗೂ ಕರ್ನಾಟಕಕ್ಕೆ ಅವಮಾನಿಸಿದೆ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ!! ಕರಾಳ ದಿನವನ್ನು ಆಚರಿಸುತ್ತಿದ್ದ ಬೆಳಗಾವಿಯ ನಾಡದ್ರೋಹಿ ಎಂಇಎಸ್‌ ಪುಂಡರೊಂದಿಗೆ ಕರ್ನಾಟಕದ ಪೊಲೀಸ್‌ ಸೆಲ್ಫಿ ತೆಗೆದುಕೊಂಡಿದ್ದಾರೆ. ಕರ್ನಾಟಕಕ್ಕೆ ಇದಕ್ಕಿಂತ ದೊಡ್ಡ ಅವಮಾನ ಇದೆಯೇ..?? ಗೊತ್ತಿಲ್ಲ ಅಲಿಯಾಸ್‌ “ಆಕಸ್ಮಿಕ” ಗೃಹ ಸಚಿವ ಅವರೆ, ಸೆಲ್ಫಿ ತೆಗೆದುಕೊಂಡ ನಾಡದ್ರೋಹಿ ಪೊಲೀಸ್‌ ವಿರುದ್ಧ ಕ್ರಮ ಯಾವಾಗ..??” ಎಂದು ತನ್ನ ಟ್ವೀಟ್ ನಲ್ಲಿ ಬಿಜೆಪಿ ಪ್ರಶ್ನಿಸಿದೆ.

ಈಗಾಗಲೆ  ಕರಾಳ ದಿನಾಚರಣೆಯ ಬಂದೋಬಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಪಿಐ ಜೆ. ಎಂ. ಕಾಲಿಮಿರ್ಚೆ, ಎಂಇಎಸ್ ಮುಖಂಡ ಶುಭಂ ಶೇಳಕೆ ಜೊತೆ ಸೌಹಾರ್ದಯುತವಾಗಿ ಮಾತನಾಡಿ, ನಂತರ ತಮ್ಮ ಮೊಬೈಲ್ ತೆಗೆದುಕೊಂಡು ಅವರೊಂದಿಗೆ ಸೆಲ್ಪಿ ತೆಗೆದುಕೊಂಡಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

Home add -Advt

Related Articles

Back to top button