*ವಿಮಾನ ನಿಲ್ದಾಣ ಸಲಹಾ ಸಮಿತಿ ಸದಸ್ಯರೊಂದಿಗೆ ಮಹತ್ವದ ಸಭೆ ನಡೆಸಿದ ಸಂಸದ ಶೆಟ್ಟರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ಬೆಳಗಾವಿ ಸಂಸದ ಜಗದೀಶ ಶೆಟ್ಟರ ಅವರು 06-11-2025 ರಂದು ಬೆಳಗಾವಿ ವಿಮಾನ ನಿಲ್ದಾಣ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಬೆಳಗಾವಿ ವಿಮಾನ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಿದರು.
ಪ್ರಾರಂಭಿಕವಾಗಿ ಬೆಳಗಾವಿ ವಿಮಾನ ನಿಲ್ದಾಣದಿಂದ ಇಂಡಿಗೋ ಹಾಗೂ ಸ್ಟಾರ್ ಏರಲೈಲೈನ್ಸ್ ಗಳು ಯಾವ ಯಾವ ನಗರಗಳಿಗೆ ವಿಮಾನ ಸೇವೆಯನ್ನು ಒದಗಿಸುತ್ತಿರುವ ಬಗ್ಗೆ ಸಂಸದರು ಮಾಹಿತಿಯನ್ನು ಅಧಿಕಾರಗಳಿಂದ ಪಡೆದುಕೊಳ್ಳುತ್ತಾ, ಸಾರ್ವಜನಿಕರ ಬೇಡಿಕೆಯಂತೆ, ಪುಣೆ, ಚೆನ್ನೈ, ಜೋದಪೂರ, ತಿರುಪತಿ ನಗರಗಳಿಗೆ ಸೇವೆಯನ್ನು ಒದಗಿಸುವ ಬಗ್ಗೆ ವಿಷಯ ಅವಲೋಕಿಸಲು ತಿಳಿಸಿದರು.
ಬೆಳಗಾವಿ ನಗರದಿಂದ ವಿಮಾನ ನಿಲ್ದಾಣದ ವರೆಗೆ ಇರುವ ರಸ್ತೆ ಸಂಪರ್ಕ ಸದಾಕಾಲ ವಾಹನ ದಟ್ಟಣೆಯಿಂದ ಕೂಡಿದ್ದು, ಹೀಗಾಗಿ ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವುದು ಕಷ್ಟಸಾಧ್ಯವಾಗಿದೆ. ಇದನ್ನು ಹೋಗಲಾಡಿಸಲು, ರಾಜ್ಯ ಸರಕಾರದಿಂದ ಪ್ರಸ್ತಾಪಿತ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಪರವರ್ತಿಸಲು ಈಗಾಗಲೆ ರೂ: 50 ಕೋಟಿ ಮಂಜುರಾಗಿದ್ದು, ಕಾಮಗಾರಿ ಶೀಘ್ರವಾಗಿ ಪ್ರಾರಂಭವಾಗುವ ಬಗ್ಗೆ ಸಂಸದರು ವಿಶ್ವಾಸ ವ್ಯಕ್ತ ಪಡಿಸಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ನೂತನ ಟರ್ಮಿನಲ್ ಕಟ್ಟಡದ ಕಾಮಗಾರಿಯ ಪ್ರಗತಿ / ಸ್ಥಿತಿಗತಿಯ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಸಂಸದರು ಮಾಹಿತಿ ಪಡಿದುಕೊಂಡು, ನಿಗದಿ ಪಡಿಸಿದ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತ ಸೂಚಿಸಿದರು.
ಇನ್ನೂ ಹಾಲಿ ವಿಮಾನ ನಿಲ್ದಾಣವನ್ನು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಪರಿವರ್ತಿಸುವ ಬಗ್ಗೆಯೂ ಸಹ ಅಧಿಕಾರಿಗಳಿಂದ ಸಂಸದರು ಮಾಹಿತಿ ಪಡೆದರು.
ಸಭೆಯಲ್ಲಿ ಏರಪೊರ್ಟ ನಿರ್ದೇಶಕರಾದ ತ್ಯಾಗರಾಜನ್, ವಿಮಾನ ನಿಲ್ದಾಣ ಸಮಿತಿ ಸದಸ್ಯರಾದ ರಾಹುಲ ಮುಚಂಡಿ, ಹನುಮಂತ ಕಾಗಲಕರ, ಸ್ನೇಹಲ ಕೋಲಕಾರ, ಭದ್ರಾ, ರಾಜು ದೇಸಾಯಿ, ಜಯಸಿಂಗ ರಜಪೂತ ಮತ್ತು ಭರತ ದೇಶಪಾಂಡೆ ಉಪಸ್ಥಿತರಿದ್ದರು.




