Belagavi NewsBelgaum NewsKannada NewsKarnataka NewsPolitics

*ಸಮಾಜದ ಸಾಮರಸ್ಯಕ್ಕೆ ಕನಕದಾಸರ ಸಂದೇಶಗಳು ದಿವ್ಯ ಔಷದ: ಈರಣ್ಣ ಕಡಾಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಮಾಜದ ಸಾಮರಸ್ಯಕ್ಕೆ ಕನಕದಾಸರ ಸಂದೇಶಗಳು ದಿವ್ಯ ಔಷದ ದಾಸರಲ್ಲಿ ಶ್ರೇಷ್ಠರಾದ ಕನಕದಾಸರು ದಾಸ ಸಾಹಿತ್ಯದ ಮೂಲಕ ಸಮಾಜದಲ್ಲಿನ ಮೌಡ್ಯವನ್ನು ತೊಲಗಿಸಿ ಜನರಲ್ಲಿ ಐಕ್ಯತೆ ಭಾವನೆಯನ್ನು ಮೂಡಿಸಲು ಅವಿರತವಾಗಿ ಶ್ರಮಿಸಿದ್ದಾರೆ. ಜಾತಿ, ಮತ, ಪಂಥ ಬೇಧವನ್ನು ಹೋಗಲಾಡಿಸಲು ಸಾಹಿತ್ಯ ಚಳವಳಿ ನಡೆಸಿದ್ದಾರೆ. ಕನಕದಾಸರು ಹಾಕಿಕೊಟ್ಟ ಸನ್ಮಾಗರ್ದಲ್ಲಿ ಸಾಗುವ ಮೂಲಕ ಜೀವನದಲ್ಲಿ ಸಾರ್ಥಕತೆ ಪಡೆಯಬೇಕು ಅವರ ಸಂದೇಶಗಳ ಅನುಷ್ಠಾನದ ಮೂಲಕ ಸಾಮರಸ್ಯದ ಸಮಾಜ ನಿರ್ಮಿಸಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಶನಿವಾರ ನ-08 ರಂದು ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ಸಭಾ ಭವನದಲ್ಲಿ ಕನಕದಾಸರ  525ನೇ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಸಂಸದ ಈರಣ್ಣ ಕಡಾಡಿ ಅವರು ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಸಮಾಜದಲ್ಲಿ ಶೋಷಣೆಗೊಳಗಾದವರಿಗೆ ನ್ಯಾಯ ಕೊಡಿಸಲು ಧ್ವನಿ ಎತ್ತಿದ್ದಾರೆ. ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಹಗಲಿರುಳು ಶ್ರಮಿಸಿದ್ದಾರೆ. ಶ್ರೇಷ್ಠ ಪರಂಪರೆಯಲ್ಲಿ ಬೆಳೆದು ಬಂದ ಕನಕದಾಸರು ಕತ್ತಲೆಯಲ್ಲಿದ್ದ ಸಮಾಜವನ್ನು ಬೆಳಕಿನಡೆಗೆ ಕೊಂಡೊಯ್ದ ಮಹನೀಯರಾಗಿದ್ದಾರೆ. ಹರಿಭಕ್ತ ಸಾರ, ರಾಮಧ್ಯಾನ ಚರಿತ್ರೆ ಸೇರಿದಂತೆ ಹಲವು ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ’ ಎಂದು ಬಣ್ಣಿಸಿದರು.

ಬಿಡಿಸಿಸಿ ಬ್ಯಾಂಕ್ ನಿಕಟಪೂರ್ವ ನಿರ್ದೇಶಕ ಸತೀಶ ಕಡಾಡಿ, ಸಹಕಾರಿ ಸಂಘದ ಉಪಾಧ್ಯಕ್ಷ ಶ್ರೀಶೈಲ ತುಪ್ಪದ, ಪರಪ್ಪ ಮಳವಾಡ, ಸಹದೇವ ಹೆಬ್ಬಾಳ, ಅಡಿವೆಪ್ಪ ಕುರಬೇಟ, ಕಾಡೇಶ ಗೋರೋಶಿ, ತುಕಾರಾಮ ಪಾಲಕಿ, ಮಲ್ಲಪ್ಪ ಹೆಬ್ಬಾಳ, ಸೋಮಲಿಂಗ ಹಡಗಿನಾಳ, ಸಿದ್ದಪ್ಪ ಹೆಬ್ಬಾಳ, ಗುರುನಾಥ ಮಧಬಾಂವಿ, ಉದ್ದಪ್ಪ ಪೂಜೇರಿ, ಪರಪ್ಪ ಗಿರೆಣ್ಣವರ, ಹಣಮಂತ ಕಲಕುಟ್ರಿ, ಶಿವಾನಂದ ಬಡಿಗೇರ, ದೊಡ್ಡಪ್ಪ ಉಜ್ಜಿನಕೊಪ್ಪ ಸೇರಿದಂತೆ ಸಿಬ್ಬಂದಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Home add -Advt

Related Articles

Back to top button