*ಶಾಸಕ ಸತೀಶ್ ಸೈಲ್ ಗೆ ಬಿಗ್ ಶಾಕ್: 21 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ*

ಪ್ರಗತಿವಾಹಿನಿ ಸುದ್ದಿ: ಅಕ್ರಮ ಹಣ ವರ್ಗಾವಣೆ ಅಧಿನಿಯಮದ ಅಡಿಯಲ್ಲಿ ಸತೀಶ್ ಸೈಲ್ ರವರ ಗೋವಾದ ಸಹಕಾರಿ ಹೆಸರಿನಲ್ಲಿದ್ದ 21 ಕೋಟಿ ಮೌಲ್ಯದ ವಸ್ತುಗಳನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಈ ಮೂಲಕ ಗೋವಾದಿಂದ ಅಕ್ರಮವಾಗಿ ಕಬ್ಬಿಣದ ಅದಿರನ್ನು ರಫ್ತು ಮಾಡಿರುವ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗೋವಾದಲ್ಲಿ ಜಪ್ತಿ ಮಾಡಿದ ಆಸ್ತಿಗಳಲ್ಲಿ, ಗೋವಾ ವಾಸ್ಕೊ ಮುರಗಾಂವ ತಾಲೂಕಿನ ಚಿಕಲಿಯಲ್ಲಿ 12,500 ಚೌ.ಮೀ ಜಾಗ, ಪೆದ್ರೋ ಗಲ್ಲೆ ಕೊಟ್ಟಾ ರವರ ಹೆಸರಿನಲ್ಲಿದ್ದ 16.850 ಚೌ.ಮೀ ಜಾಗ, ವಾಸ್ಕೊ ಕದಂಬ ಬಸ್ ನಿಲ್ದಾಣದ ಬಳಿಯಿದ್ದ ಅವರ್ ಲೇಡಿ ಆಫ್ ಮರ್ಸೆಸ್ ಕಟ್ಟಡದ ಮೊದಲ ಮಹಡಿಯಿಂದ ಐದನೇಯ ಮಹಡಿವರೆಗಿನ ವ್ಯಾಪಾರಿ ವಸ್ತುಗಳು, ಈ ವಸ್ತುಗಳ ಮಾರುಕಟ್ಟೆ ಮೌಲ್ಯ 64 ಕೋಟಿ ಎಂದು ಹೇಳಲಾಗಿದೆ.
ಪ್ರಕರಣ ಹಿನ್ನೆಲೆ ಏನು..?
ಕಾರವಾರ ಶಾಸಕ ಸತೀಶ್ ಸೈಲ್ ರವರು ಶ್ರೀ ಮಲ್ಲಿಕಾರ್ಜುನ ಶಿಫಿಂಗ್ ಪ್ರೈ ಲಿ ಎಂಬ ಕಂಪನಿಯ ಮೂಲಕ ಪರವಾನಗಿಯಿಲ್ಲದೆಯೇ ಗೋವಾದಿಂದ ಅಕ್ರಮವಾಗಿ ಕಬ್ಬಿಣ ಅದಿರನ್ನು ರಫ್ತು ಮಾಡಿದ್ದರು ಎನ್ನಲಾಗಿದೆ.
ಹಾಗಾಗಿ 15 ಮಾರ್ಚ 2010 ರಂದು ಕರ್ನಾಟಕದ ಬೇಲಿಕೇರಿ ಬಂದರಿನಲ್ಲಿ ಅಧಿಕಾರಿಗಳು ನಡೆಸಿದ ಪರಿಶೀಲನೆ ಸಂದರ್ಭದಲ್ಲಿ ಬೃಹತ್ ಪ್ರಮಾಣದಲ್ಲಿ ಕಬ್ಬಿಣದ ಅದಿರು ಪತ್ತೆಯಾಗಿತ್ತು.
ಈ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಕರ್ನಾಟಕ, ಗೋವಾ, ದೆಹಲಿ, ಮುಂಬಯಿಯಲ್ಲಿ ವಿವಿದೆಡೆ 15 ಸ್ಥಳಗಳಲ್ಲಿ ದಾಳಿ ನಡೆಸಿ ಕಾರ್ಯಾಚರಣೆ ನಂತರ ಕಾರವಾರ ಶಾಸಕ ಸತೀಶ್ ಸೈಲ್ ರವರನ್ನು ಬಂಧಿಸಿದ್ದರು. ಅವರ ಬಳಿಯಿದ್ದ ಸುಮಾರು 8 ಕೋಟಿ ರೂ ಹಣ ಹಾಗೂ ಬಂಗಾರದ ಆಭರಣವನ್ನು ಜಪ್ತಿ ಮಾಡಿದ್ದರು. ಸತೀಶ್ ಸೈಲ್ ರವರಿಗೆ ವೈದ್ಯಕೀಯ ಕಾರಣದ ಮೂಲಕ ಲಭಿಸಿದ್ದ ತಾತ್ಕಾಲಿಕ ಜಾಮೀನು ನವೆಂಬರ್ 7 ರಂದು ರದ್ದುಗೊಳಿಸಲಾಗಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.



