Belagavi NewsBelgaum NewsKannada NewsKarnataka NewsLatestNationalPolitics

*ಯಾರೇ ಇರಲಿ ನಮ್ಮ ಜತೆ ಇದ್ದವರನ್ನು ನಾವು ಕೈ ಬಿಡಲ್ಲ: ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಣ್ಣಾಸಾಹೇಬ್ ಜೊಲ್ಲೆ ಅವರನ್ನು ನಮ್ಮೆಲ್ಲರ ಸಹಮತದಿಂದ ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದೇವೆ. ಬ್ಯಾಂಕ್‌ ನಡೆಸಿದ ಅನುಭವ ಅವರಿಗಿದ್ದು, ಬಿಡಿಸಿಸಿ ಬ್ಯಾಂಕ್‌ನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೇ ಇರಲಿ ನಮ್ಮ ಜತೆ ಇದ್ದವರನ್ನು ನಾವು ಕೈ ಬಿಡಲ್ಲ. ಅಣ್ಣಾಸಾಹೇಬ್ ಜೊಲ್ಲೆ ಅವರು ನಿರ್ದೇಶಕರಾಗಿ ಆಯ್ಕೆಯಾಗಲು ಅವರ ಜತೆ ನಿಂತಿದ್ದೇವೆ. ಈಗಲೂ ಅವರು ಅಧ್ಯಕ್ಷರಾಗಿ ಆಯ್ಕೆಯಾಗಲು ನಾವು ಸಹಕಾರ ನೀಡುತ್ತೇವೆ. 

ನಮ್ಮ ಪರ ಸದಸ್ಯರ ಸೆಳೆಯಲು ಬೆಂಗಳೂರಿನ, ಬೆಳಗಾವಿಯಲ್ಲಿ ಇದ್ದುಕೊಂಡು ಮಸಾಜ್ ಮಾಡಿದ್ರು. ಆದ್ರೆ ನಾವು ಆಯುರ್ವೇದೀಕ್ ಡಾಕ್ಟರ್ ಇದ್ದೇವೆ. ಸರಿಯಾದ ಔಷಧ ಕೊಟ್ಟಿದ್ದೇವೆ ಹೀಗಾಗಿ ಸರಿಯಾಗಿದೆ. ಜಿಲ್ಲೆಯಿಂದ ಒಬ್ಬರನ್ನು ಹಾಲುಮತ ಸಮಾಜದವರನ್ನು ಅಪೆಕ್ಸ್‌ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆ ಮಾಡಲಾಗುವುದು ಎಂದು ಇದೇ ವೇಳೆ ಸಚಿವರು ತಿಳಿಸಿದರು.

Home add -Advt

Related Articles

Back to top button