ಹೊಸ ವರ್ಷಕ್ಕೆ ಕನ್ನಡಿಗರಿಗೆ ಕಿಚ್ಚ ಸುದೀಪ್ ಕುಟುಂಬದಿಂದ ವಿಶೇಷ ಶುಭಾಷಯ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ವಿಶ್ಯಾದ್ಯಂತ ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗಿದೆ. ಹೊಸ ವರ್ಷಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಕನ್ನಡದ ಜನತೆಗೆ ವಿನೂತನವಾಗಿ ಶುಭಾಷಯಗಳನ್ನು ಕೋರಿದ್ದಾರೆ.

ಟ್ವಿಟರ್ ನಲ್ಲಿ ಒಂದು ವಿಡಿಯೋ ಅಪ್ ಲೋಡ್ ಮಾಡಿದ್ದು, ಅದರಲ್ಲಿ ”ನನ್ನ ಪ್ರೀತಿಯ ಸಮಸ್ತ ಕನ್ನಡಿಗರ ಕುಟುಂಬಕ್ಕೆ ಈ ನಿಮ್ಮ ಪ್ರೀತಿಯ ಕಿಚ್ಚ ಸುದೀಪನ ಕುಟುಂಬದಿಂದ ಹೊಸ ವರ್ಷದ ಶುಭಾಶಯಗಳು ಎಂದು ವಿಶ್ ಮಾಡಿದ್ದಾರೆ ಕಿಚ್ಚನ ಕುಟುಂಬದವರೆಲ್ಲರೂ ನ್ಯೂ ಇಯರ್ ವಿಶ್ ಮಾಡಿದ್ದಾರೆ.

Home add -Advt

ಇನ್ನು ಟ್ವಿಟರ್ ನಲ್ಲೂ ಶುಭ ಕೋರಿರುವ ಕಿಚ್ಚ ಸುದೀಪ್, ’2020ಕ್ಕೆ ಹೆಜ್ಜೆಯಿಡುವ ಮುನ್ನ ಈ ವರ್ಷದ ನಿಮ್ಮ ಹೆಜ್ಜೆಗುರುತುಗಳತ್ತ ಒಮ್ಮೆ ಕಣ್ಣಾಯಿಸಿ ನೋಡಿ. ಈ ವರ್ಷದಲ್ಲಿ ನೀವು ಕಳೆದ ಅಮೂಲ್ಯ ಕ್ಷಣಗಳು ಮತ್ತು ಜೊತೆಯಾದ ವ್ಯಕ್ತಿಗಳು!  ನೀವು ಕ್ಷಮೆ ಕೇಳಬೇಕಾದವರು  ಮತ್ತು ನಿಮ್ಮಿಂದ ಕ್ಷಮೆಗೆ ಕಾದಿರುವವರು. ಬೇರೆಯವರಿಂದ ನಿಮಗೆ ಸಿಕ್ಕ ಒಳ್ಳೆಯದು ಮತ್ತು ನಿಮ್ಮಿಂದ ಬೇರೆಯವರಿಗಾದ ಒಳ್ಳೆಯದು!

ಮುಂತಾದುವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿಕೊಂಡರೆ ನೀವು ನಡೆದು ಬಂದ ಹಾದಿ ಬಗ್ಗೆ ಸ್ಪಷ್ಟತೆಗಳು ಸಿಕ್ಕಿಬಿಡುತ್ತವೆ. ಆ ಸ್ಪಷ್ಟತೆಗಳ ಆಧಾರದ ಮೇಲೆ ಈ ವರ್ಷ ಮಾಡಬೇಕಾದ್ದೇನು? ಮಾಡಬಾರದ್ದೇನು? ನೀ ಬದಲಾಗಬೇಕಾದ್ದು ಎಲ್ಲಿ? ಸ್ಥಿರತೆ ಕಾಪಾಡಿಕೊಳ್ಳಬೇಕಾದ್ದು ಎಲ್ಲಿ ? ಎಂಬುವುಗಳ ಬಗ್ಗೆ ದಿಟ್ಟ ನಿರ್ಧಾರ ಹೊಂದಿ 2020ನೇ ವರ್ಷಕ್ಕೆ ಹೆಜ್ಜೆಯಿಡೋಣ. 2020 ಅನ್ನು ಅತ್ಯಂತ ಹರ್ಷದಿಂದ  ಸ್ವಾಗತಿಸಿ, ಹೆಚ್ಚು ಸಾರ್ಥಕವಾಗಿ ಕಳೆಯೋಣ. Happy 2020 to All ಎಂದು ಬರೆದುಕೊಂಡಿದ್ದಾರೆ.

Related Articles

Back to top button