*ಹುಕ್ಕೇರಿಶರ ಹಿರಿಯರನ್ನು ಗೌರವಿಸುವ ಉತ್ಸವ: ರಮೇಶ್ ಕತ್ತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಹುಕ್ಕೇರಿ ಹಿರೇಮಠದಿಂದ ಹಿರಿಯರನ್ನು ಗೌರವಿಸುವುದು ಒಂದು ಉತ್ಸವವೇ ಹುಕ್ಕೇರಿಶರ ಉತ್ಸವವಾಗಿ ಮಾರ್ಪಟ್ಟಿದೆ ಎಂದು ಮಾಜಿ ಸಂಸದ ರಮೇಶ್ ಕತ್ತಿ ಬಣ್ಣಿಸಿದರು.
ಮಂಗಳವಾರ ಹುಕ್ಕೇರಿಯ ಗುರುತಾಂತೇಶ್ವರ ಸಂಸ್ಥಾನ ಮಠದಲ್ಲಿ ನಿವೃತ್ತ ಹಿರಿಯ ಶಿಕ್ಷಕಿ ಶಾಂತಾ ದೇವಿ ಹುಲ್ಲೆಪ್ಪನವರ ಅವರನ್ನು ಗೌರವಿಸಿ ಮಾತನಾಡಿದರು. ಬೆಳಗಾವಿಯ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಪ್ರತಿ ವರ್ಷ ಹುಕ್ಕೇರಿಶನ ಉತ್ಸವ ಮಾಡುತ್ತಾರೆ. ಆರಂಭದ ಉತ್ಸವದಲ್ಲಿ ತಮ್ಮ ಸಮನ್ವಯ ಸಿರಿ ಬೃಹತ್ ಗ್ರಂಥವನ್ನು ಐದು ವಯೋವೃದ್ಧ ತಾಯಂದಿರಿಂದ ಬಿಡುಗಡೆ ಮಾಡುವುದರ ಮೂಲಕ ಆರಂಭಿಸಿರುವ ಉತ್ಸವದಲ್ಲಿ ಎಲ್ಲ ದಿಗ್ಗಜರು ಬರುತ್ತಾರೆ. ಆದರೆ ಶ್ರೀಗಳು ಹಿರಿಯರನ್ನು ಹೆಚ್ಚು ಗೌರವಿಸುತ್ತಾರೆ ಎಂದರು.
2025ನೇ ಸಾಲಿನ ಹುಕ್ಕೇರಿಶನ ಉತ್ಸವದಲ್ಲಿ 94 ವಯಸ್ಸಿನ ಶ್ರೀಮತಿ ಶಾಂತಾದೇವಿ ಉಳವೇಶ್ ಹುಲ್ಲೆಪ್ಪನವರಮಠ ಗೌರವಿಸುವ ಮೂಲಕ ಶ್ರೀಗಳು ಹಿರಿಯರನ್ನು ಹೇಗೆ ಗೌರವಿಸಬೇಕು ಎನ್ನುವುದನ್ನು ತಿಳಿಸಿದ್ದಾರೆ ಎಂದರು.
ಬೆಳಗಾವಿ ಹುಕ್ಕೇರಿ ಹಿರೇಮಠ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾವು ಮನೆ ಬಂಧುಗಳನ್ನು ಬಿಟ್ಟು ಮಠಕ್ಕೆ ಆಗಿರುತ್ತೇವೆ. ಆಗ ನಮಗೆ ಸಮಾಜವೇ ತಂದೆ, ತಾಯಿ ಆಗಿರುತ್ತದೆ. ಮುರುಗೋಡದಲ್ಲಿ ನಾನು ಅಧ್ಯನ ಮಾಡುವಾಗ ತಾಯಿ ಶಾಂತಾ ದೇವಿ ಅವರು ಕೈ ತುತ್ತು ನೀಡಿದ ತಾಯಿ. ಇವತ್ತು ಅವರನ್ನು ಗೌರವಿಸುವ ಭಾಗ್ಯ ನಮಗೆ ಬಂದಿರುವುದು ಹೆಮ್ಮೆಯ ಸಂಗತಿ ಎಂದರು.
ಗೌರವ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕಿ ಶಾಂತಾ ದೇವಿ ಹುಲ್ಲೆಪ್ಪನವರ, ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಸಮಾಜದಲ್ಲಿ ಎಲ್ಲ ಸಮಾಜದವರಿಗೆ ಮಾರ್ಗದರ್ಶನ ಮಾಡುವುದರ ಮೂಲಕ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವುದು ಎಲ್ಲಾ ತಾಯಂದಿರಿಗೆ ಖುಷಿ ತಂದಿದೆ. ಇವತ್ತು ಇಂಗ್ಲಿಷ್ ನಿವೃತ್ತ ಪ್ರಾಧ್ಯಾಪಕಿ ಗುರುದೇವಿ ಹುಲ್ಲೆಪನವರಮಠ ನನ್ನ ಪುತ್ರಿ ಹುಕ್ಕೇರಿ ಹಿರೇಮಠದ ಸಾಮಾಜಿಕ ಕೊಡುಗೆಗಳು ಎಂಬ ಪ್ರಬಂಧವನ್ನು ಇಂಗ್ಲಿಷ್ ಅನುವಾದ ಮಾಡಿರುವುದನ್ನು ಇಲ್ಲಿ ಸ್ಮರಿಸುತ್ತ ಅವರಿಗೆ ಸಾಧನ ಶ್ರೀ ಪ್ರಶಸ್ತಿ ನೀಡುತ್ತಿರುವುದು ಅತೀವ ಸಂತೋಷ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಮಾತನಾಡಿ, ಶ್ರೀ ಚಂದ್ರಶೇಖರ ಶಿವಾಚಾರ್ಯರ ಕಾರ್ಯ ಮೆಚ್ವುವಂಥದ್ದು, ಪ್ರಾರಂಭದ ಹುಕ್ಕೇರಿ ಉತ್ಸವದಲ್ಲಿ ನಮ್ಮ ತಾಯಿಗೆ ಗೌರವಿಸಿದ್ದು ಸ್ಮರಿಸುತ್ತೇವೆ ಎಂದರು.
ಕಾರ್ಯಕ್ರಮಕ್ಕೆ ಮೈಸೂರು ಸಂಸದ ಯಧುವೀರ ಒಡೆಯರ ಭಾಗಿಯಾಗಿ ವಿಕ್ಷಿಸಿದರು.



