Latest

*ದೇಹಲಿ ಬಳಿಕ ಶ್ರೀನಗರದಲ್ಲಿ ಬಾಂಬ್ ಬ್ಲಾಸ್ಟ್: 9 ಜನ ಸಾವು*

ಪ್ರಗತಿವಾಹಿನಿ ಸುದ್ದಿ: ದೇಹಲಿ ಬಾಂಬ್ ಸ್ಫೋಟ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿನ ನೌಗಮ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ತಡರಾತ್ರಿ ಭೀಕರ ಸ್ಪೋಟ  ಸಂಭವಿಸಿದ್ದು ದುರಂತದಲ್ಲಿ ಕನಿಷ್ಠ 9 ಜನರ ಸಾವಾಗಿದೆ. 

ಈ ಘಟನೆಯಲ್ಲಿ ಸುಮಾರು 30 ಜನರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎನ್ನಲಾಗಿದೆ. ಪೊಲೀಸ್ ಠಾಣೆಯಲ್ಲಿ ಸಂಭವಿಸಿದ ಸ್ಫೋಟದ ಸಿಸಿಟಿವಿ ತುಣುಕೊಂದು ಪತ್ತೆಯಾಗಿದೆ. ಅದರಲ್ಲಿ ಭಯಾನಕ ಸ್ಫೋಟದ ಸಂದರ್ಭ ಭಾರೀ ಶಬ್ದ ಹಾಗೂ ಒತ್ತಡದಿಂದ ಕಿಟಕಿ ಬಾಗಿಲುಗಳು ತೆರೆದುಕೊಂಡಿರುವುದು ಕಾಣಿಸಿಕೊಂಡಿದೆ. ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿರುವುದು ಸೆರೆಯಾಗಿದೆ.

ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು ರಕ್ಷಣಾ ಕಾರ್ಯಕರ್ತರು ಅವಶೇಷಗಳಡಿಯಲ್ಲಿ ಇನ್ನೂ ಹಲವರು ಸಿಲುಕಿಕೊಂಡಿರುವ ಶಂಕೆಯಲ್ಲಿ ಹುಡುಕಾಟ ಮುಂದುವರೆಸಿದ್ದಾರೆ. ಇನ್ನು ಸ್ಥಳದಿಂದ 300 ಅಡಿ ದೂರದಲ್ಲಿ ದೇಹದ ಭಾಗಗಳು ಪತ್ತೆಯಾಗಿದ್ದು, ಇದು ಸ್ಫೋಟದ ತೀವ್ರತೆ ಎಷ್ಟಿತ್ತೆಂದು ಒತ್ತಿ ಹೇಳುತ್ತದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಮತ್ತು ವಿಧಿವಿಜ್ಞಾನ ತಂಡಗಳು ಫರಿದಾಬಾದ್‌ನಿಂದ ತಂದ ಸ್ಫೋಟಕ ವಸ್ತುಗಳನ್ನು ನಿರ್ವಹಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಭಯೋತ್ಪಾದನಾ ಮಾಡ್ಯೂಲ್ ಪ್ರಕರಣದಿಂದ ವಶಪಡಿಸಿಕೊಂಡ 350 ಕೆಜಿ ದಾಸ್ತಾನಿನ ಬಹುಪಾಲು ಭಾಗವನ್ನು ಪ್ರಾಥಮಿಕ ಎಫ್‌ಐಆ‌ರ್ ದಾಖಲಿಸಲಾದ ಪೊಲೀಸ್ ಠಾಣೆಯೊಳಗೆ ಸಂಗ್ರಹಿಸಲಾಗಿತ್ತು.

Home add -Advt

ವಶಪಡಿಸಿಕೊಂಡ ಕೆಲವು ರಾಸಾಯನಿಕಗಳನ್ನು ಪೊಲೀಸ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ಹೆಚ್ಚಿನ ಪಾಲು ಠಾಣೆಯಲ್ಲಿಯೇ ಇತ್ತು. ಶವಗಳನ್ನು ಶ್ರೀನಗರದ ಪೊಲೀಸ್ ನಿಯಂತ್ರಣ ಕೊಠಡಿಗೆ ಕೊಂಡೊಯ್ಯಲಾಗಿದೆ.

ಇದೀಗ ಪೊಲೀಸರು ಈ ಸ್ಫೋಟ ಪ್ರಕರಣ ಸಂಬಂಧ ಎರಡು ಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಒಂದು ಸಾಧ್ಯತೆಯೆಂದರೆ ಠಾಣೆಯಲ್ಲಿ ಸೀಲಿಂಗ್ ಮಾಡುವಾಗ ಅಮೋನಿಯಂ ನೈಟ್ರೇಟ್‌ಗೆ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾದರೆ ಇನ್ನೊಂದು ಸಾಧ್ಯತೆ ಇದು ಭಯೋತ್ಪಾದಕರ ಕೃತ್ಯ ಎಂದು ಶಂಕಿಸಲಾಗಿದೆ.

Related Articles

Back to top button