
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನ ಹಾಡಹಗಲೇ ನಡೆದಿದ್ದ ಬರೋಬ್ಬರಿ 7.11 ಕೋಟಿ ಹಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರು 5 ಕೋಟಿಗೂ ಅಧಿಕ ಹಣ ವಶಕ್ಕೆ ಪಡೆದಿದ್ದಾರೆ.
ಆಂಧ್ರಪ್ರದೇಶದಲ್ಲಿ 5.30 ಕೋಟಿ ಹಣವನ್ನು ದರೋಡೆಕೋರರಿಂದ ಪೊಲೀಸರು ವಶಪಡಿಸಿಕೊಂಡಿದ್ದು, ಉಳಿದ ಹಣದೊಂದಿಗೆ ದರೋಡೆಕೋರರು ಪರಾರಿಯಾಗಿದ್ದಾರೆ. ಎಸ್ಕೇಪ್ ಆಗಿರುವ ದರೋಡೆಕೋರರಿಗಾಗಿ ಶೋಧಕಾರ್ಯ ಮುಂದುವರೆದಿದೆ.
ದರೋಡೆ ಪ್ರಕರಣದಲ್ಲಿ ಆಂಧ್ರದ ಚಿತ್ತೂರು ಬಳಿ ಇನ್ನೋವಾ ಕಾರನ್ನು ವಶಕ್ಕೆ ಪದೆದಿದ್ದ ಪೊಲೀಸರು, ಓರ್ವ ಕಾನ್ಸ್ ಟೇಬಲ್ ಸೇರಿದಂತೆ ಕೆಲ ಶಂಕಿತರನ್ನು ವಶಕ್ಕೆ ಪಡೆದಿದ್ದರು. ಇದೀಗ 7.11 ಕೋಟಿಯಲ್ಲಿ 5.30 ಕೋಟಿ ಹಣ ಜಪ್ತಿ ಮಾಡಿದ್ದು, ಉಳಿದ ಹಣ, ಕಳ್ಳರಿಗಾಗಿ ಹುಡುಕಾಟ ಮುಂದುವರೆದಿದೆ.



