
ಪ್ರಗತಿವಾಹಿನಿ ಸುದ್ದಿ: ಕುಡುಕ ತಮ್ಮನ ಕಾಅಟಕ್ಕೆ ಬೇಸತ್ತ ಅಣ್ಣ ತಮ್ಮನನ್ನೇ ಹತ್ಯೆಗೈದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಕಾರಿನಲ್ಲಿ ಕರೆದೊಯ್ದ ಅಣ್ಣ ತಮ್ಮನನ್ನು ಹತ್ಯೆಗೈದು ನೈಸ್ ರೋಡ್ ಬಳಿ ರಸ್ತೆ ಪಕ್ಕದಲ್ಲಿ ಶವ ಬಿಸಾಕಿ ಹೋಗಿದ್ದಾನೆ.
ರಸ್ತೆ ಪಕ್ಕದ ಪೊದೆಯೊಂದರಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ತನಿಖೆ ವೇಳೆ ಕೊಲೆ ರಹಸ್ಯ ಬಯಲಾಗಿದೆ. ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಧನರಾಜ್ ಕೊಲೆಯಾದ ತಮ್ಮ. ಶಿವರಾಜ್ ತಮ್ಮನನ್ನೇ ಕೊಂದ ಅಣ್ಣ.
ತಮ್ಮನ ಕುಡಿತದ ಚಟಕ್ಕೆ ನೊಂದಿದ್ದ ಶಿವರಾಜ್ ತನ್ನ ಸ್ನೇಹಿತರ ಜೊತೆ ಸೇರಿ ತಮ್ಮನ ಹತ್ಯೆಗೆ ಪ್ಲಾನ್ ಮಾಡಿದ್ದ. ಅದರಂತೆ ಕಾರಿನಲ್ಲಿ ತಮ್ಮನನ್ನು ಕರೆದೊಯ್ದ ಅಣ್ಣ, ಕಾರಿನಲ್ಲಿಯೇ ಕೊಲೆಗೈದು ರಸ್ತೆ ಪಕ್ಕದಲ್ಲಿ ಶವ ಬಿಸಾಕಿ ಎಸ್ಕೇಪ್ ಆಗಿದ್ದಾರೆ.
ಪ್ರಕರಣ ಸಂಬಂಧ ಆರೋಪಿ ಅಣ್ಣ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.



