
ಪ್ರಗತಿವಾಹಿನಿ ಸುದ್ದಿ: ಅಯ್ಯಪ್ಪಸ್ವಾಮಿ ದರ್ಶನಕ್ಕೆ ಶಬರಿಮಲೆಗೆ ಹೋಗಿದ್ದ ಮಲಾಧಾರಿ ಓರ್ವರು ಏಕಾಏಕಿ ನಾಪತ್ತೆಯಾಗಿರುವ ಘಟನೆ ಶಬರಿಮಲೆ ದೇವಸ್ಥಾನದಲ್ಲಿ ನಡೆದಿದೆ.
ಅಯ್ಯಪ್ಪ ಮಾಲಾಧಾರಿ ಅಮರೇಶ್ ನಾಪತ್ತೆಯಾದವರು. ಕೋಲಾರದಿಂದ ಶಬರಿಮಲೆಗೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿದ್ದರು. ಈ ವೇಳೆ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಪ್ರವೇಶ ಪಡೆದ ಬಳಿಕ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಅಮರೇಶ್ ಅವರಿಗೆ ಮಾತು ಬರುವುದಿಲ್ಲ. ಯಾರಾದರೂ ಕಂಡಲ್ಲಿ ಅವರ ಬಗ್ಗೆ ಮಾಹಿತಿ ನೀಡಿ ಎಂದು ಕುಟುಂಬ ಮನವಿ ಮಾಡ್ದೆ. ಅಮರೇಶ್ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ನೂಟುವೆ ಗ್ರಾಮದ ನಿವಾಸಿ.



