*ತಮ್ಮದೇ ಪಕ್ಷದ ಶಾಸಕರ ಖರೀಸುತ್ತಿರುವ ಕಾಂಗ್ರೆಸ್: ಎಂಎಲ್ ಎಗಳಿಗೆ 50 ಕೋಟಿ; ಮಂತ್ರಿ ಸ್ಥಾನಕ್ಕೆ 200 ಕೋಟಿ ಆಫರ್*

ಛಲವಾದಿ ನಾರಾಯಣಸ್ವಾಮಿ ಆರೋಪ
ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದೆ. ಕಾಂಗ್ರೆಸ್ ನಾಯಕರಿಂದಲೇ ಕಾಂಗ್ರೆಸ್ ಶಾಸಕರ ಕುದುರೆ ವ್ಯಾಪಾರ ಶುರುವಾಗಿದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ತಮ್ಮದೇ ಶಾಕರನ್ನು ಖರೀದಿಸಲು ಮೊದಲು 50 ಕೋಟಿ ರೂ ಕೊಡುತ್ತಿದ್ದರು. ಈಗ 50 ಕೋಟಿ ಜೊತೆಗೆ ಒಂದು ಫ್ಲ್ಯಾಟ್, ಫಾರ್ಚೂನರ್ ಕಾರು ಆಫರ್ ಮಾಡಿದ್ದಾರಂತೆ ಎಂದು ಆರೋಪಿಸಿದ್ದಾರೆ.
ಈಗ ಚೌಕಾಸಿ ಮಾಡುತ್ತಿರುವ ಶಾಸಕರು ಕೂಡ 75 ಕೋಟಿ ಕೊಡಿ ನಿಮ್ಮ ಪರ ಬರುತ್ತೇವೆ ಎಂದಿದ್ದಾರೆ. ಇನ್ನೂ ಕೆಲವರು 100 ಕೋಟಿಗೆ ತಲುಪಿದ್ದಾರೆ ಎಂದಿದ್ದಾರೆ.
ಇನ್ನು ಮಂತ್ರಿ ಸ್ಥಾನಕ್ಕೆ ಈಗಾಗಲೇ ಡೀಲ್ ಆಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾಗೆ 200 ಕೋಟಿ ಕೊಡಬೇಕಂತೆ. ವಿರೇಂದ್ರ ಪಪ್ಪಿ ಈ ಮೊದಲೇ ಅಡ್ವಾನ್ಸ್ ಆಗಿ ಸುರ್ಜೇವಾಲಾಗೆ 200 ಕೋಟಿ ಕೊಟ್ಟಿದ್ದಾರೆ ಎಂಬ ಮಾತಿದೆ. ಮೊದಲು ಸುರ್ಜೇವಾಲಾರನ್ನು ಬಂಧಿಸಬೇಕು ಎಂದು ವಾಗ್ದಾಳಿ ನಡೆಸಿದರು.

