Belagavi NewsBelgaum NewsKannada NewsKarnataka NewsPolitics

*ಕಾಂಗ್ರೆಸ್ಸಿನಲ್ಲಿ ಯಾರಾದರೂ ಸಿಎಂ ಆಗಲಿ ನಮಗೆ ಸಂಬಂಧವಿಲ್ಲ: ರಮೇಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾಂಗ್ರೆಸ್ಸಿನಲ್ಲಿ ಯಾರಾದರೂ ಮುಖ್ಯಮಂತ್ರಿಯಾಗಲಿ. ಅದಕ್ಕೂ ನಮಗೂ ಸಂಬಂಧ ಇಲ್ಲ. ನಾವು ರಾಜ್ಯದಲ್ಲಿ ವಿರೋಧ ಪಕ್ಷದಲ್ಲಿದ್ದೇವೆ. ಅವರ ಪಕ್ಷದ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಅವರು ತಿಳಿಸಿದರು.‌

ಸೋಮವಾರ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಸಮ್ಮಿಶ್ರ ಸರಕಾರ ಪತನವಾಗಲು ಡಿ.ಕೆ.ಶಿವಕುಮಾರ ಕಾರಣ. ಡಿ.ಕೆ. ಶಿವಕುಮಾರ ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಿರುವುದಕ್ಕೆಯೇ ಸಮ್ಮಿಶ್ರ ಸರಕಾರ ಪತನವಾಯಿತು. ಇದರಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ. ಡಿ.ಕೆ.ಶಿವಕುಮಾರ ಬಿಜೆಪಿಗೆ ಬಂದರೆ ನಾನು ಸ್ವಾಗತಿಸುವುದಿಲ್ಲ. ಇನ್ನೂ ಎರಡೂವರೆ ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಇರಲಿ ಎಂದರು.

ಪ್ರತ್ಯೇಕ ರಾಜ್ಯಕ್ಕೆ ನಮ್ಮ ವಿರೋಧ ಇದೆ: ರಮೇಶ ಜಾರಕಿಹೊಳಿ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ನಮ್ಮ ವಿರೋಧವಿದ್ದು, ಅಖಂಡ ಕರ್ನಾಟಕಕ್ಕೆ ಮಾತ್ರ ನಮ್ಮ ಬೆಂಬಲವಿದೆ ಎಂದು ಹೇಳಿದರು.

Home add -Advt

ಬಿಜೆಪಿಯಲ್ಲಿ ಯಾವುದೇ ಕ್ರಾಂತಿಯಾಗಲ್ಲ. ನಮ್ಮಲ್ಲಿ ಹೈಕಮಾಂಡ್ ನಿರ್ಣಯಕ್ಕೆ ನಾವು ಬದ್ಧ. ಇದೇ ವೇಳೆ ಶಾಸಕ ರಾಜು ಕಾಗೆ ಅವರ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಒಪ್ಪುವುದಿಲ್ಲ. ಅಖಂಡ ರಾಜ್ಯಕ್ಕೆ ನಮ್ಮ ಬೆಂಬಲವಿದೆ. ಕೆವಲ ಮಂತ್ರಿ ನಿಗಮದ ಬೇಡಿಕೆಯಾಗಬಾರದರು. ಬೆಳಗಾವಿ ವಿಭಜನೆಗೆ ಸಂಬಂಧಿಸಿದಂತೆ ಗೋಕಾಕ್ ಕೂಡ ಜಿಲ್ಲೆಯಾಗಬೇಕು. ಕಳೆದ ಬಾರಿ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ತಾವು ಸಚಿವರಾಗಿದ್ದಾಗ ಇದು ಅಂತಿಮವಾಗಿತ್ತು. ಆದರೇ, ಅದು ಸಾಧ್ಯವಾಗಲಿಲ್ಲ ಎಂದರು.

ವಾಲ್ಮೀಕಿ ಸಮಾಜ ಎಸ್ಟಿಗೆ ಬರಲ್ಲ: ಗ್ರೆಡ್- 2 ತಹಶಿಲ್ದಾರ ನಡೆಗೆ ಆಕ್ರೋಶ 

ಮಾಜಿ ಸಂಸದ ರಮೇಶ ಕತ್ತಿ ವಾಲ್ಮೀಕಿ ಸಮಾಜದ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ರು. ಈ ಬಗ್ಗೆ ಕಾನೂನು ಹೋರಾಟ ನಡೆಯುತ್ತಿದೆ. ಆದರೆ ಹುಕ್ಕೇರಿ ಗ್ರೆಡ್- 2 ತಹಶಿಲ್ದಾರ ವಾಲ್ಮೀಕಿ ಸಮಾಜ ಎಸ್ಟಿಗೆ ಬರಲ್ಲ ಎಂದು ಬರೆದುಕೊಟ್ಟಿದ್ದಾರೆ. ಇದು ದೊಡ್ಡ ದುರಂತ ಎಂದು ಆಕ್ರೋಶ ಹೊರಹಾಕಿದರು.

ನಾನು ಅಹಿಂದ ಸಂಘಟನೆಗೆ ಬೆಂಬಲ ಕೊಟ್ಟಿದ್ದೇವೆ. ಸಂಘಟನೆ ಮೂಲಕವೇ ಅನೇಕರು ಸಚಿವರು, ಸಿಎಂ ಆಗಿದ್ದಾರೆ. ರಾಜ್ಯ, ಕೇಂದ್ರ ‌ಸರ್ಕಾರಕ್ಕೆ ಆಗುತ್ತಿರೋ ಅನ್ಯಾಯ ಬಗ್ಗೆ ಮನವೊರಿಕೆ ಮಾಡುತ್ತೇನೆ. ವಾಲ್ಮೀಕಿ, ದಲಿತ ಹಾಗೂ ಹಿಂದುಳಿದ ಸಮಾಜದ ನಾನು ಹೋರಾಟ ಮಾಡುತ್ತೇನೆ ಹುಕ್ಕೇರಿ ತಹಶಿಲ್ದಾರ ಅಮಾನತು ಆಗಬೇಕು. ಬಂಧನ ಮಾಡಿ ಸಮಗ್ರ ತನಿಖೆ ಮಾಡಬೇಕು. ಸತೀಶ ಜಾರಕಿಹೊಳಿ ಪ್ರಶ್ನೆ ಮಾಡದೇ ಇರೋದು ದುರಂತ. ರಮೇಶ ಕತ್ತಿಯ ಕೇಸ್ ನಲ್ಲಿ ವಾಲ್ಮೀಕಿ ಸಮಾಜ ಎಸ್ಟಿಗೆ ಬರಲ್ಲ. ಇದು ಪ್ರವರ್ಗ ಒಂದು ಬರಲಿದೆ ಎಂದು ಹೇಳಿದ್ದಾರೆ. ಬೇಡರ ಬಗ್ಗೆ ಅವಾಚ್ಯ ಶಬ್ದವನ್ನು ರಮೇಶ ಕತ್ತಿ ಬಳೆಸಿದ್ರು. ಹಿಂಗೆ ಬಿಟ್ಟರೇ ನಮ್ಮ ಸಮಾಜಕ್ಕೆ ಮುಂದೆ ಅನ್ಯಾಯವಾಗಲಿದೆ. ಈ ಕುರಿತು ರಾಷ್ಟ್ರಪತಿಗಳಿಗೆ ದೂರು ನೀಡಿ ಬೀದಿಗೆ ಇಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜಕೀಯಕ್ಕಾಗಿ ಕೆಲವರು ಹುಕ್ಕೇರಿ ತಹಶಿಲ್ದಾರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಅವರನ್ನು ಅಮಾನತು ಮಾಡಿ ತನಿಖೆಗೆ ವಹಿಸಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ. ಮಾಜಿ ಸಂಸದ ರಮೇಶ್ ಕತ್ತಿ ಅವರ ಜಾತಿ ನಿಂಧನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರೇಡ್ -2 ತಹಶಿಲ್ದಾರ ಸಹಾಯ ಮಾಡಿದ್ದಾನೆ. ಷಡ್ಯಂತ್ರ ನಡೆಸಿದ ಅಧಿಕಾರಿಯ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

Related Articles

Back to top button