Belagavi NewsBelgaum NewsKannada NewsKarnataka NewsSports

*ನ.26 ರಂದು ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆ: ಎನ್ ಬಿ ಶಿರಶ್ಯಾಡ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಸಕ್ತ ಸಾಲಿನ ಪದವಿಪೂರ್ವ ಕಾಲೇಜುಗಳ ಬಾಲಕ, ಬಾಲಕಿಯರ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಗಳ ಕ್ರೀಡಾಕೂಟವನ್ನು ನ.26 ರಂದು ಮುಂಜಾನೆ 6 ಗಂಟೆಯಿಂದ ರಾಜ್ಯ ಮಟ್ಟದ ಸ್ಟೇಟಿಂಗ್ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಭಾರಿ ಉಪನಿರ್ದೇಶಕರಾದ ಎನ್.ಬಿ.ಶಿರಶ್ಯಾಡ ಅವರು ತಿಳಿಸಿದರು.

ನಗರದ ವಾರ್ತಾ ಭವನದಲ್ಲಿ ಸೋಮವಾರ(ನ.24) ಜರುಗಿದ ರಾಜ್ಯಮಟ್ಟದ ಸ್ಟೇಟಿಂಗ್ ಸ್ಪರ್ಧೆಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ದಿನಾಂಕ: 26-11-2025 ರಂದು ಬೆಳಗ್ಗೆ 6.00 ರಿಂದ 9.30 ರವರೆಗೆ ಜರುಗಲಿರುವ ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 100 ಕ್ಕೂ ಹೆಚ್ಚು ಸೈಟ‌ರ್ಗಗಳು, ಪೋಷಕರು, ಸ್ವಯಂಸೇವಕರು ಮತ್ತು ಕಾಲೇಜಿನ ಸಿಬ್ಬಂದಿಗಳು ಆಗಮಿಸಲಿದ್ದಾರೆ.

ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಬೆಳಗಾವಿ ಮತ್ತು ಗೋವಿಂದರಾಮ ಸೆಕ್ಟೇರಿಯಾ ವಿಜ್ಞಾನ ಪದವಿ ಪೂರ್ವ ಕಾಲೇಜು, ಬಳಕವಾಡಿ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ಟೇಟಿಂಗ್ ಸ್ಪರ್ಧೆಯನ್ನು ಎಸ್.ಜಿ.ಎಫ್.ಐ. ನಿಯಮದಂತೆ ಸಂಘಟಿಸಲಾಗುತ್ತಿದ್ದು ದಿನಾಂಕ 26-11-2025 ರಂದು ಬೆಳಗ್ಗೆ 6.00 ರಿಂದ 9.30 ರವರೆಗೆ, ತದನಂತರ 10:30 ರಿಂದ 05:00 ಗಂಟೆಯವರೆಗೆ ಶಿವಗಂಗಾ ಸ್ಟೇಟಿಂಗ್ ಸ್ಪೋರ್ಟ್ಸ್ ಕ್ಲಬ್, ಓಂ ನಗರ ರೋಡ, (ಪ್ಯಾಟ್ಟನ ಶೋರೂಂ ಹಿಂಭಾಗ) ಬೆಳಗಾವಿಯಲ್ಲಿ ಒಟ್ಟು 7 (ಏಳು) ರೀತಿಯ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಭಾರಿ ಉಪನಿರ್ದೇಶಕರಾದ ಎನ್.ಬಿ.ಶಿರಶ್ಯಾಡ ಅವರು ತಿಳಿಸಿದರು.

Home add -Advt

ಪತ್ರಿಕಾ ಗೋಷ್ಠಿಯಲ್ಲಿ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ಜಿ ಎನ್ ಪಾಟೀಲ್, ಜಿ.ಎಸ್.ಎಸ್. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದಎಸ್ ಎಂ ದೇಸಾಯಿ, ಜಿಲ್ಲಾ ಕ್ರೀಡಾ ಸಂಯೋಜಕರು ಪ್ರಭು ಶಿವನಾಯಕರ್, ಕಾರ್ಯದರ್ಶಿಗಳು ಬೆಳಗಾವಿ ಜಿಲ್ಲಾ ಉಪನ್ಯಾಸಕರ ಸಂಘ ಡಾ. ನಾಗರಾಜ್ ಮರೆಣ್ಣವರ, ಸಂಘಟನಾ ಕಾರ್ಯದರ್ಶಿಗಳಾದ ಆನಂದ ರತ್ನಪಗೋಳ ಉಪಸ್ಥಿತರಿದ್ದರು.

Related Articles

Back to top button