
ಪ್ರಗತಿವಾಹಿನಿ ಸುದ್ದಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ, ರಾಮಮಂದಿರದ ಮೇಲೆ ಧರ್ಮ ಧ್ವಜಾರೋಹಣ ನೆರವೇರಿಸಿದರು.
ಶ್ರೀರಾಮ ಹಾಗೂ ಸೀತಾ ಮಾತೆಯ ದೈವಿಕ ವಿವಾಹವನ್ನು ಆಚರಿಸುವ ವಿವಾಹ ಪಂಚಮಿಯ ಸಂದರ್ಭದಲ್ಲಿ ಅಯೋಧ್ಯೆ ಪೂರ್ಣ ವೈಭವದಿಂದ ಹೊಳೆಯುತ್ತಿದೆ. ತ್ರೇತಾಯುಗದಲ್ಲಿ ರಾಅಮ ಹಾಗೂ ಸೀತಾ ಮಾತೆಯ ವಿವಾಹ ಮಾರ್ಗಶಿರ ಮಾಸದ ಹದಿನೈಡು ದಿನಗಳ ಐದನೇ ದಿನದಂದು ನಡೆದಿತ್ತು ಎನ್ನಲಾಗಿದೆ.
ನವೆಂಬರ್ 25 ಅದೇ ಐದನೇ ದಿನವನ್ನು ಇಂದಿಗೂ ಆಚರಿಸಲಾಗುತ್ತದೆ. ಧರ್ಮಧ್ವಜ ಕೋವಿದಾರ ಮರದ ಚಿತ್ರ, ಸೂರ್ಯ ಚಿಹ್ನೆ ಹಾಗೂ ಓಂ ಚಿಹ್ನೆಯನ್ನು ಹೊಂದಿದೆ. ಕೋವಿದಾರ ಮರವನ್ನು ಅನೇಕ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಧರ್ಮಧ್ವಜಾರೋಹಣಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಬಾಲರಾಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಆರ್.ಎಸ್.ಎಸ್ ಮುಖಂಡ ಮೋಹನ್ ಭಾಗವತ್ ಸಾಥ್ ನೀಡಿದರು.
ಬಳಿಕ ಶ್ರೀರಾಮ ಮಂದಿರದ ಮೇಲೆ ಕೇಸರಿ ಧರ್ಮಧ್ವಜಾರೋಹಣ ನೆರವೇರಿಸಲಾಯಿತು. 20 ಅಡಿ ಉದ್ದ 10 ಅಡಿ ಅಗಲವಿರುವ ತ್ರಿಕೋನಾಕಾರದ ಧ್ವಜ ಇದಾಗಿದೆ. ಶ್ರೀರಾಮ ಮಂದಿರದ ಮೇಲೆ ಕೇಸರಿ ಧ್ವಜ ರಾರಾಜಿಸಿದೆ.



