
ಪ್ರಗತಿವಾಹಿನಿ ಸುದ್ದಿ: ಉದ್ಯಮಿ ಕಿಡ್ನ್ಯಾಪ್ ಮಾಡಿ ಹಲ್ಲೆ ನಡೆಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ರೌಡಿ ಶೀಟರ್, ನಟ ದರ್ಶನ್ ಅಭಿಮಾನಿ ಬೇಕರಿ ರಘು ನನ್ನು ಪೊಲೀಸರು ಬಂಧಿಸಿದ್ದಾರೆ.
ಕೋಕಾ ಕಾಯ್ದೆಯಡಿ ರೌಡಿ ಶೀಟರ್ ಬೇಕರಿ ರಘು ಬಂಧನವಾಗಿದೆ. ಬೇಕರಿ ರಘು ಹಾಗೂ ಗ್ಯಾಂಗ್ ಉದ್ಯಮಿ ಮನೋಜ್ ನನ್ನು ಮಹಾಲಕ್ಷ್ಮೀ ಲೇಔಟ್ ನಿಂದ ಕಿಡ್ನ್ಯಾಪ್ ಮಾಡಿ ದಾಬಸ್ ಪೇಟೆಗೆ ಕರೆದೊಯ್ದು ಹಣಕ್ಕೆ ಬೇಡಿಕೆ ಇಟ್ಟಿತ್ತು. ಆದರೆ ಮನೋಜ್ ಹಣ ನೀಡಲು ಒಪ್ಪದಿದ್ದಾಗ ಹಲ್ಲೆ ನಡೆಸಿತ್ತು.
50 ಲಕ್ಷ ಹಣಕ್ಕೆ ಕೂಡಲೇ ವ್ಯವಸ್ಥೆ ಮಾಡು ಎಂದು ವಾರ್ನಿಂಗ್ ಕೊಟ್ಟು ಅವರನ್ನು ಬಿಟ್ಟು ಕಳುಹಿಸಲಾಗಿತ್ತು. ಇದೀಗ ಈ ಪ್ರಕರಣದ ಪ್ರಮುಖ ಆರೋಪಿ ರೌಡಿ ಶೀಟರ್ ಬೇಕರಿ ರಘುನನ್ನು ಪೊಲೀಸರು ಬಂಧಿಸಿದ್ದಾರೆ.



