
ಪ್ರಗತಿವಾಹಿನಿ ಸುದ್ದಿ: ಹಾಂಗ್ ಕಾಂಗ್ ನಲ್ಲಿ ವಸತ್ ಸಮುಚ್ಛಯದ ಬಹುಮಹಡಿ ಕಟ್ಟಡಗಳಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, 44 ಜನರು ಮೃತಪಟ್ಟಿದ್ದಾರೆ. 300 ಜನರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬುಧವಾರ ಮಧ್ಯಾಹ್ನ ವಸತಿ ಸಮುಚ್ಛಯದ ನಾಲ್ಕು ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನವೀಕರಣ ಕಾಮಗಾರಿಗಾಗಿ ಕಟ್ಟಡದ ಸುತ್ತಲೂ ಬಿದಿರಿನ ಕಂಬಗಳನ್ನು ಅಳವಡಿಸಿದ್ದರಿಂದ ಬೆಂಕಿ ಮತ್ತಷ್ಟು ವ್ಯಾಪಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದವರಲ್ಲಿ ಹಲವರು ವೃದ್ಧರು ಎಂದು ತಿಳಿದುಬಂದಿದೆ.
200 ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.


