
ಡಿಟ್ವಾ ಚಂಡಮಾರುತದ ಅಬ್ಬರ
ಪ್ರಗತಿವಾಹಿನಿ ಸುದ್ದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವುಂಟಾಗಿದ್ದು, ಡಿಟ್ವಾ ಚಂಡಮಾರುತವಾಗಿ ರೂಪುಗೊಂಡಿದೆ. ಇದರಿಂದಾಗಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಡಿಟ್ವಾ ಚಂಡಮಾರುತದ ಪರಿಣಾಮ ಮುಂದಿನ 2-3 ದಿನಗಳವರೆಗೆ ತಮಿಳುನಾಡು, ಆಂಢ್ರಪ್ರದೇಶದ ಉತ್ತರ ಹಾಗೂ ಇತರ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ. ಚಂಡಮಾರುತವು ಉತ್ತರ ತಮಿಳುನಾಡು, ಪುದುಚೇರಿ, ದಕ್ಷಿಣ ಆಂಧ್ರಪ್ರದೇಶದ ಕರಾವಳಿಯ ಕಡೆಗೆ ಸಾಗುತ್ತಿದ್ದು, ನವೆಂಬರ್ 30ರವರೆಗೆ ಮಳೆಯಾಗಲಿದೆ.
ಶ್ರೀಲಂಕಾದ ಪೊಟ್ಟುವ್ಲ್ ಬಳಿ ಚಂಡಮಾರುತ ರೂಪುಗೊಂಡಿದೆ. ನಾಳೆಯಿಂದ ಎರಡುದಿನಗಳ ಕಾಲ ಕೇರಳ, ಮಾಹೆಯಲ್ಲಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿಯೂ ಭಾರ್ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


