HealthKannada NewsKarnataka News

*ಮಕ್ಕಳಲ್ಲಿ ಹೆಚ್ಚುತ್ತಿರುವ ಬೊಜ್ಜು: ಜಾಗೃತಿ ಮೂಡಿಸಲು ಡಿ.6 ರಂದು ಸಂವಾದ*

ಪ್ರಗತಿವಾಹಿನಿ ಸುದ್ದಿ: ಇಂದಿನ ಮಕ್ಕಳಲ್ಲಿ ಅತಿಯಾಗಿ ಬೊಜ್ಜುತನ ಹೆಚ್ಚುತ್ತಿದ್ದು, ಈ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ “ಹ್ಯಾಪಿಯೆಸ್ಟ್‌ ಹೆಲ್ತ್‌” ಡಿ. 6 ರಂದು ಕೋರಮಂಗಲದ ಸೇಂಟ್‌ ಜಾನ್ಸ್‌ ಸಭಾಂಗಣದಲ್ಲಿ ಗೆಟ್ ಸೆಟ್, ಗ್ರೋ! ಚಿಲ್ಡ್ರನ್ಸ್ ವೆಲ್ನೆಸ್ ಸಮ್ಮಿಟ್‌’ 3ನೇ ಆವೃತ್ತಿಯನ್ನು ಆಯೋಜಿಸಿದೆ.

ಇಡೀ ದಿನದ ಸಮ್ಮಿಟ್‌ನಲ್ಲಿ “ಮಕ್ಕಳು ಮತ್ತು ಬೊಜ್ಜು: ಕಾಳಜಿ ಮತ್ತು ಅದನ್ನು ನಿಭಾಯಿಸುವ ಮಾರ್ಗಗಳು”. ಈ ಶೀರ್ಷಿಕೆಯಡಿ  ಸಂವಾದ ನಡೆಯಲಿದ್ದು, ತಜ್ಞ ವೈದ್ಯರು ಈ ಬಗ್ಗೆ ಮಕ್ಕಳಿಗೆ ಹಾಗೂ ಅವರ ಕುಟುಂಬಗಳಿಗೆ ವಿಷಯದ ಮನವರಿಕೆ ಮಾಡಿಕೊಡಲಿದ್ದಾರೆ, ಈ ಸಮ್ಮಿಟ್‌ನಲ್ಲಿ ಮಕ್ಕಳು, ಶಿಕ್ಷಣ ಸಂಸ್ಥೆಗಳು ಸಹ ನೋಂದಣಿ ಮಾಡಿಕೊಳ್ಳಲು ಅರ್ಹವಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್‌ನ ಸಹ-ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘು ಕೃಷ್ಣನ್ ಮಾತನಾಡಿ, “ಭಾರತದ ಮಕ್ಕಳಲ್ಲಿ ಬಾಲ್ಯದಲ್ಲಿಯೇ ಸ್ಥೂಲಕಾಯತೆ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ, ಇಂದು ಜಂಕ್‌ ಫುಡ್‌ನ ಹಾವಳಿಯಿಂದ ಸಾಕಷ್ಟು ಮಕ್ಕಳು ಪೌಷ್ಠಿಕಯುಕ್ತ ಆಹಾರ ಸೇವಿಸದೇ ಜಂಕ್‌ ಫುಡ್‌ನತ್ತ ವಾಲುತ್ತಿದ್ದಾರೆ, ಇದರಿಂದ ಸಣ್ಣ ವಯಸ್ಸಿನಲ್ಲಿಯೇ ಬೊಜ್ಜು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ನಮ್ಮ ಮುಂದಿನ ಪೀಳಿಗೆಗೆ ಆರೋಗ್ಯ ಮಹತ್ವ ಅರ್ಥ ಮಾಡಿಸದೇ ಹೋದರೆ, ಅಪಾಯ ತಪ್ಪಿದ್ದಲ್ಲ. ಹೀಗಾಗಿ ಈ ಸಮ್ಮಿಟ್‌ ಆಯೋಜಿಸಲಾಗಿದೆ ಎಂದು ಹೇಳಿದರು. 

ಹ್ಯಾಪಿಯೆಸ್ಟ್ ಹೆಲ್ತ್‌ನ ಜ್ಞಾನ ವಿಭಾಗದ ಸಹ-ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿ ಜೋಶಿ, ಈಗಾಗಲೇ ಈ ಆರೋಗ್ಯಕ್ಕೆ ಸಂಬಂಧಿಸಿದ ಎರಡು ಸಮ್ಮಿಟ್‌ ಆಯೋಜಿಸಿದ್ದು, ಯಶಸ್ವಿಯಾಗಿವೆ. ಇದೀಗ ಮೂರನೇ ಸಮ್ಮಿಟ್‌ ಆಯೋಜಿಸಿದ್ದು, ಮಕ್ಕಳಿಗೆ ಹಾಗೂ ಅವರ ಕುಟುಂಬಸ್ಥರಿಗೆ ಒಬೇಸಿಟಿಯ ಸಮಸ್ಯೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು. 

Home add -Advt

ಇಡೀ ದಿನ ಸಮ್ಮಿಟ್‌ನಲ್ಲಿ ಮಕ್ಕಳಿಗೆ ಮನರಂಜನಾ ಕಾರ್ಯಕ್ರಮದ ಜೊತೆಜೊತೆಗೆ ಕಲಿಕೆಗೂ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ನೋಂದಣಿ ಮಾಹಿತಿ: ಪೋಷಕರು, ಶಾಲಾ ಸಂಸ್ಥೆಗಳು ಮತ್ತು ಉತ್ಸಾಹಿಗಳು ಈ ಸಮ್ಮಿಟ್‌ಗೆ https://www.happieshethealth.com/wellness_summit/get-set-grow-2025 ಈ ವೆಬ್‌ಸೈಟ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

Related Articles

Back to top button