
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೀಣೆ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ವಿಠ್ಠಲ ರುಕ್ಷ್ಮಿಣಿ ದೇವಸ್ಥಾನ ಕಟ್ಟಡದ ಕಾಲಂ ಪೂಜೆಯನ್ನು ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ನೆರವೇರಿಸಿದರು.

ಸುಮಾರು 65 ಲಕ್ಷ ರೂ,ಗಳ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣಗೊಳ್ಳುತ್ತಿದೆ. ಅತ್ಯಂತ ಸುಂದರವಾಗಿ ಗ್ರಾಮಸ್ಥರ ಸಲಹೆ ಪಡೆದು ದೇವಸ್ಥಾನ ನಿರ್ಮಾಣ ಮಾಡುವಂತೆ ಗುತ್ತಿಗೆದಾರರಿಗೆ ಮೃಣಾಲ ಹೆಬ್ಬಾಳಕರ್ ಸೂಚನೆ ನೀಡಿದರು.
ಈ ವೇಳೆ ಮಾರುತಿ ಡುಕರೆ, ಸುಭಾಷ ಡುಕರೆ, ಕೃಷ್ಣ ಪಾಟೀಲ, ಅಜಿತ್ ಡುಕರೆ, ರವಿ ಡುಕರೆ, ಮಹಾದೇವ ಬಿರ್ಜೆ, ದೇವೆಂದ್ರ ಡುಕರೆ, ಪುಣ್ಣಪ್ಪ ದಳವಿ, ಪುಂಡಲೀಕ್ ದಳವಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹೇಮಂತ ಪಾಟೀಲ, ಸದಸ್ಯರಾದ ವರ್ಷಾ ಡುಕರೆ, ಸಂತು ಪಾಟೀಲ ಮುಂತಾದದವರು ಉಪಸ್ಥಿತರಿದ್ದರು.



