*ನಕಾರಾತ್ಮಕ ವಿಚಾರದಿಂದ ದೂರವಿದ್ದು ಮನಸ್ಸಿಗೆ ಶುದ್ಧವಾದ ಆಹಾರ ನೀಡಿ: ಡಾ.ಮೋಹಿತ ದಯಾಳ್ ಗುಪ್ತಾ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ್ರೋಧ, ದ್ವೇಷ ಮತ್ತು ನಕಾರಾತ್ಮಕ ವಿಚಾರಗಳಿಂದ ದೂರವಿದ್ದು ಮನಸ್ಸಿಗೆ ಉತ್ತಮ ಆಹಾರ ನೀಡಿದಾಗ ಮಾತ್ರ ದೇವರನ್ನು ಕಾಣಲು ಸಾಧ್ಯ ಎಂದು ದೆಹಲಿಯ ಡಾ.ಮೋಹಿತ್ ದಯಾಳ್ ಗುಪ್ತಾ ಹೇಳಿದರು.
ಬೆಳಗಾವಿಯಲ್ಲಿ ನಾಗನೂರು ರುದ್ರಾಕ್ಷಿ ಮಠದಿಂದ ನೀಡಲಾದ “ಆತ್ಮಸ್ವಾಸ್ಯ ಶ್ರೀ” ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ದೇಹಕ್ಕೆ ಶುದ್ಧವಾದ ಆಹಾರ ಶುದ್ಧವಾದ ಗಾಳಿ ಶುದ್ಧವಾದ ನೀರು ಎಷ್ಟು ಅಗತ್ಯವೋ ಅಷ್ಟೇ ಮನಸ್ಸಿಗೂ ಕೂಡ ಶುದ್ಧವಾದ ವಿಚಾರ ಮತ್ತು ವಿಶ್ರಾಂತಿ ಅತಿ ಅಗತ್ಯವಾಗಿದೆ. ಪ್ರತಿ ದಿವಸ ನಾವು ಆಹಾರವನ್ನು ಸೇವಿಸುವಾಗ ದೇವರ ಸ್ಮರಣೆಯನ್ನು ಮಾಡಬೇಕು ಇದರಿಂದ ನಾವು ಸೇವಿಸುವ ಆಹಾರವು ಪ್ರಸಾದವಾನಕಾರಾತ್ಮಕ ವಿಚಾರಗಳಿಂದ ದೂರವಿದ್ದು ಮನಸ್ಸಿಗೆ ಶುದ್ಧವಾದ ಆಹಾರ ನೀಡಿ ಎಂದು ಡಾ.ಮೋಹಿತ ದಯಾಳ್ ಗುಪ್ತಾಗುತ್ತದೆ ಎಂದವರು ಹೇಳಿದರು.
ಜೀವನಶೈಲಿ ಮಾನಸಿಕ ದೈಹಿಕ ಸಾಮಾಜಿಕ ಮತ್ತು ಅಧ್ಯಾತ್ಮಿಕ ಸ್ಥಿತಿ ಸರಿ ಇದ್ದಾಗ ಮಾತ್ರ ಉತ್ತಮವಾದ ಆರೋಗ್ಯ ಪ್ರೇಮ ಸ್ನೇಹ ಕಲ್ಯಾಣದ ಭಾವನೆಗಳನ್ನು ಅಂದ ಬೇಕು ಅದರಿಂದ ಮಾತ್ರ ಉತ್ತಮ ಜೀವನ ಸಾಧ್ಯ, ದಿನ ಬೆಳಗಾದರೆ ಮೊಬೈಲ್ ನಿಂದ ದಿನ ಆರಂಭಿಸುವ ಬದಲು ತಪಸ್ಸಿನಿಂದ ಪ್ರಾರಂಭಿಸೋಣ ಅಂದರೆ ಧ್ಯಾನದಿಂದ ಪ್ರಾರಂಭಿಸೋಣ ಉತ್ತಮವಾದ ಜೀವನಕ್ಕೆ ಉತ್ತಮವಾದ ಸಹಯೋಗ ಇರಬೇಕು ಉತ್ತಮವಾದ ಸಹಯೋಗದಿಂದ ಉತ್ತಮವಾದ ಸಂಸ್ಕಾರ ಲಭ್ಯವಾಗುತ್ತದೆ ಉತ್ತಮವಾದ ಸಂಸ್ಕಾರದಿಂದ ಉತ್ತಮವಾದ ಪರಿಸರ ನರ‍್ಮಾಣವಾಗುತ್ತದೆ ಅದರಿಂದ ಆತ್ಮ ಪರಿಶುದ್ಧವಾಗುತ್ತದೆ ಆಗ ನಮ್ಮ ಜೀವನವು ಕೂಡ ಉತ್ತಮವಾಗುತ್ತದೆ ನಿರೋಗಿಯಾಗುತ್ತದೆ , ಇನ್ನೊಬ್ಬರನ್ನು ಪ್ರೇಮದಿಂದ ಕಾಣುವಂತಾಗಬೇಕು ದ್ವೇಷ ರಹಿತವಾದ ಭಾವನೆಯನ್ನು ಹೊಂದಿರಬೇಕು ಅಧ್ಯಾತ್ಮದ ದಾರಿಯನ್ನು ನಾವು ಆಯ್ದುಕೊಳ್ಳಬೇಕು ಆಗ ದೇವರನ್ನು ಕಾಣಲು ಸಾಧ್ಯ ಅಂತಹ ಜೀವನವನ್ನು ರೂಪಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸಬೇಕು ಎಂದವರು ಹೇಳಿದರು.

ಡೊಳ್ಳು ಬಾರಿಸುವ ಮೂಲಕ ಬೆಳಗಾವಿಯ ಸಂಸದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕಾರ್ಯಕ್ರ. ಉದ್ಘಾಟಿಸಿ ಮಾತನಾಡಿ, ಶಿವಬಸವ ಶ್ರೀಗಳ ಕರ‍್ಯಕ್ರಮ ಸುಂದರವಾಗಿ ನಡೆಯುತ್ತಿದೆ. ಭಕ್ತಿ ಭಾವದಿಂದ ಈ ಕಾರ‍್ಯಕ್ರಮ ನಡೆಯುತ್ತಿದೆ. ಇಡೀ ರಾಜ್ಯದಲ್ಲೂ ನಾಗನೂರು ಮಠ ಹೆಗ್ಗಳಿಗೆ ಪಡೆದಿದೆ. ಬಸವಣ್ಣನವರ ಕಾಯಕವೆ ಕೈಲಾಸ ಹೇಳಿದ ರೀತಿ ಭಕ್ತರಿಗೆ ದಾಸೋಹ, ಶಿಕ್ಷಣ ವ್ಯವಸ್ಥೆವನ್ನು ಶಿವಬಸವ ಶ್ರೀಗಳು ಮಾಡಿದರು ಎಂದವರು ಹೇಳಿದರು.
ಕೆಎಲ್ ಇ ಸೋಸೈಟಿ ಪ್ರಾರಂಭವಾಗಿದ್ದರಿಂದ ಈ ಭಾಗದ ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ಕೊಡುವ ಕೆಲಸ ಮಾಡಿತು. ಕೆಎಲ್ಇ ಶಿಕ್ಷಣ ನೀಡಿದರೆ ಶಿವಬಸವ ಶ್ರೀಗಳು ಆಶ್ರಯ ಹಾಗೂ ಅನ್ನ ನೀಡುವ ಕೆಲಸ ಮಾಡಿದ್ರು. ಬಂಗಲೆ ಬಾಡಿಗೆ ಪಡೆದು ಅನ್ನದಾಸೋಹ ಆರಂಭಿಸಿದರು. ಭಕ್ತಾದಿಗಳ ಕಡೆ ಜೋಳಿಗೆ ಹಾಕಿಕೊಂಡು ಹೊಗಿ ದಾಸೋಹ ನಡೆಸಿದರು. ಶ್ರೀಗಳು ಹಲವಾರು ಸಾಮಾಜೀಕ ಕೆಲಸ ಮಾಡಿದರು. ಪ್ರಸಾದ ನೀಲಯದಲ್ಲಿ ಜಾತ್ಯಾತಿವಾಗಿ ಎಲ್ಲರೂ ಇದ್ದರು ಎಂದವರು ಹೇಳಿದರು.
ದೇಶದ ಸ್ವಾತಂತ್ರ‍್ಯ ಹೋರಾಟದ ಸಂದರ್ಭದಲ್ಲಿ. ಹೊದಲಿಗೆ ಗಾಂಧಿಯವರು ಬಂದಾಗ ಅವರ ಜೊತೆ ಸಮಾಲೋಚನೆ ನಡೆಸಿದರು. ಆಗ ಬ್ರಿಟಿಷ್ ಕಣ್ಣು ಶ್ರೀಗಳ ಮೇಲೆ ಬಿತ್ತು ಆದರು ಶ್ರೀಗಳು ಹೋರಾಟ ನಿಲ್ಲಿಸಲಿಲ್ಲ ಹಿಂದಿನ ಶ್ರೀಗಳು ಮತ್ತು ಇಂದಿನ ಶ್ರೀಗಳು ನೇತೃತ್ವದಲ್ಲಿ ನಾಗನೂರು ಮಠ ಜಾಗೃತಿ ಸ್ಥಳವಾಗಿದೆ ಎಂದವರು ಹೇಳಿದರು.
ಕಾರ‍್ಯಕ್ರಮದ ಸಾನಿಧ್ಯವನ್ನು ಬೆಳಗಾವಿ ಕಾರಂಜಿ ಮಠದ ಶ್ರೀ. ಗುರುಸಿದ್ಧ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಮಂಡ್ಯ ಜಿಲ್ಲೆಯ ಬೇಬಿಬೆಟ್ಟ ಶ್ರೀ. ರಾಮಯೋಗೀಶ್ವರ ಮಠದ ಶ್ರೀ. ಶಿವಬಸವ ಮಹಾಸ್ವಾಮಿಗಳು ವಹಿಸಿದ್ದರು.
ನೇತೃತ್ವದಲ್ಲಿ ಬಸವಕಲ್ಯಾಣ ಅನುಭವ ಮಂಟಪದ ಶ್ರೀ. ಬಸವ ದೇವರು ಹಾಗೂ ಸಮ್ಮುಖದಲ್ಲಿ ಜಾಗೀರ ಜಾಡಲದಿನ್ನಿಯ ಶ್ರೀ ನೀಲಾಂಬಿಕಾ ಬಸವ ಯೋಗಾಶ್ರಮದ ಶ್ರೀ ವೀರಭದ್ರ ಮಹಾಸ್ವಾಮಿಗಳು, ಡಾ. ಅಲ್ಲಮಪ್ರಭು ಮಹಾಸ್ವಾಮೀಜಿಯವರು ಉಪಸ್ಥಿತರಿದ್ದರು.
ಇದೇ ವೇಳೆ ಬೆಳ್ಳೇರಿಯ ಶ್ರೀ. ಬಸವಾನಂದ ಮಹಾಸ್ವಾಮಿಗಳಿಗೆ ಶ್ರೀಮಠದಿಂದ ಗೌರವ ಸನ್ಮಾನವನ್ನು ನೀಡಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ತೆಳಗಿನಹಟ್ಟಿಯ ಸನ್ನಿಂಗಪ್ಪಾ ಮುಶೆನ್ನ ಗೋಳ ಮತ್ತು ಬೆಳಗಾವಿಯ ಪುಂಡಲೀಕ್ ವಾಷ್ಠರ್(ಶಾಸ್ತ್ರಿ) ಅವರನ್ನು ಶ್ರೀ ಮಠದ ಪರವಾಗಿ ಸತ್ಕರಿಸಿ ಗೌರವಿಸಲಾಯಿತು.
ಶ್ರೀ ಮಠದಿಂದ ಕೊಡ ಮಾಡಲಾಗುವ “ಕನ್ನಡ ನುಡಿ ಶ್ರೀ” ಪ್ರಶಸ್ತಿಯನ್ನು ಬೆಂಗಳೂರಿನ ರ‍್ನಾಟಕ ಸ್ವಾಭಿಮಾನಿ ವೇದಿಕೆಯ ಅಧ್ಯಕ್ಷ ಶಂಕರ್ ಹೂಗಾರ್ ಅವರಿಗೂ ಮತ್ತು ಗೋವಾದ ಕನ್ನಡ ಹೋರಾಟಗಾರ ಸಿದ್ದಣ್ಣ ಮೇಟಿ ಅವರುಗಳಿಗೆ ಪ್ರದಾನ ಮಾಡಿ ಗೌರವಿಸಲಾಯಿತು.
ಶ್ರೀ ಮಠದಿಂದ ಕೊಡ ಮಾಡುವ ಅತ್ಯುತ್ತಮ ಸಾಧಕ ವಿದ್ಯರ‍್ಥಿನಿ ಬಾಲಯೋಗಿನಿ ಪ್ರಶಸ್ತಿ ಯನ್ನು ಈ ಬಾರಿ ಎಸ್ ವಿ ಬಾಳೆಕುಂದ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯರ‍್ಥಿನಿ ಪ್ರಾಜೆಕ್ತಾ ದಳವಾಯಿ ಇವರಿಗೆ ನೀಡಿ ಸನ್ಮಾನಿಸಲಾಯಿತು.
ಡಾ ಎಚ್ ಬಿ ರಾಜಶೇಖರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಶೇಖರ್ ಪಾಟೀಲ್ ಮತ್ತು ಏ.ಕೆ.ಪಾಟೀಲ್ ಕಾರ‍್ಯಕ್ರಮ ನರ‍್ವಹಿಸಿದರು. ಕಾರ‍್ಯಕ್ರಮದಲ್ಲಿ ಮಾಜಿ ಶಾಸಕರಾದ ಅನಿಲ್ ಬೆನಕೆ , ಸಂಜಯ ಪಾಟೀಲ್, ಎಂ.ಬಿ ಬನ್ನೂರ್, ಶಂಕರ್ ಹೂಗಾರ್ ಜಾಗತಿಕ ಲಿಂಗಾಯಿತ ಮಹಾಸಭೆಯ ಅಧ್ಯಕ್ಷ ಬಸವರಾಜ ರೊಟ್ಟಿ, ಹಿರಿಯ ಸಾಹಿತಿ ಬಸವರಾಜ ಜಗಜಂಪಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.



