Belagavi NewsBelgaum NewsKannada NewsKarnataka NewsLife StyleNationalPolitics
*ತಿರುಪತಿ ದರ್ಶನಕ್ಕೆ ಶಿಫಾರಸ್ಸು ಪತ್ರಗಳ ಪರಿಗಣಿಸಲು ಮನವಿ-ಸಚಿವ ರಾಮಲಿಂಗಾರೆಡ್ಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಕ್ಕೆ ರಾಜ್ಯದ ಶಾಸಕರುಗಳ ಶಿಫಾರಸ್ಸು ಪತ್ರಗಳನ್ನು ಪರಿಗಣಿಸಿ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಟಿ.ಟಿ.ಡಿಗೆ ಮನವಿ ಸಲ್ಲಿಸಲಾಗಿದೆ.
ಎಸ್.ಆರ್.ವಿಶ್ವನಾಥ್ ಅವರು ಇಂದು ವಿಧಾನಸಭೆಯಲ್ಲಿ ಗಮನ ಸೆಳೆದ ಸೂಚನೆಗೆ ಉತ್ತರಿಸಿದ ಸಾರಿಗೆ ಮತ್ತು ಮುಜರಾಯಿ ಸಚಿವರು ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ ಸನ್ನಿಧಾನದಲ್ಲಿ ನಿರ್ಮಾಣವಾಗಿರುವ ಕರ್ನಾಟಕ ಭವನ ಕಳಪೆ ಕಾಮಗಾರಿ ಕುರಿತು ಈಗಾಗಲೇ ಭೇಟಿ ನೀಡಿ ಪರಿಶೀಲಿಸಲಾಗಿದೆ. ಪ್ರಸ್ತುತ ನಿರ್ವಹಣೆ ಮಾಡುತ್ತಿರುವ ಸಂಸ್ಥೆ ಕನಿಷ್ಟ 3 ಸ್ಟಾರ್ ಮಾದರಿಯಲ್ಲಿ ಸೌಲಭ್ಯ ನೀಡುವಂತೆ ಕ್ರಮ ವಹಿಸಬೇಕಿದೆ.
ರಾಜ್ಯದ ಶಾಸಕರುಗಳು ಶಿಫಾರಸ್ಸು ಪತ್ರವನ್ನು ಪರಿಗಣಿಸಿ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಟಿ.ಟಿ.ಡಿಯವರಿಗೆ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ.



