CrimeKannada NewsKarnataka NewsLatest

*ಚೆಕ್ ಡ್ಯಾಮ್ ನಲ್ಲಿ ಮುಳುಗಿ ಇಬ್ಬರು ಯುವಕರು ನೀರುಪಾಲು*

ಪ್ರಗತಿವಾಹಿನಿ ಸುದ್ದಿ: ಕುರಿ ತೊಳೆಯಲು ಹೋಗಿದ್ದ ಇಬ್ಬರು ಯುವಕರು ಚೆಕ್ ಡ್ಯಾಂ ನಲ್ಲಿ ಮುಳುಗಿ ನೀರುಪಾಲಾಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಜಿ.ಆರ್.ಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಿಶ್ವನಾಥ್ (23) ಹಾಗೂ ಮಾರುತಿ (19) ಮೃತ ಯುವಕರು. ಕುರಿ ತೊಳೆಯುವಾಗ ಆಕಸ್ಮೀಕವಾಗಿ ನೀರಿಗೆ ಬಿದ್ದ ಯುವಕರಿಗೆ ಈಜು ಬರುತ್ತಿರಲಿಲ್ಲ. ಹಾಗಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Home add -Advt


Related Articles

Back to top button