Belagavi NewsBelgaum NewsKannada NewsKarnataka NewsPolitics

*ಶ್ರೀ ಪಂಚರಾಶಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌*

ಕಾಮಗಾರಿಯ ಗುಣಮಟ್ಟ ಕಾಪಾಡಲು ಸಚಿವರ ಆದೇಶ

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ರಾಕಸಕೊಪ್ಪ ಗ್ರಾಮದಲ್ಲಿ ಸುಮಾರು 1.50 ಕೋಟಿ ವೆಚ್ಚದ ನೂತನ ಶ್ರೀ ಪಂಚರಾಶಿ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಅವರು ಭೂಮಿ ಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಸಚಿವರು, ಕಾಮಗಾರಿಯ ಗುಣಮಟ್ಟ ಕಾಪಾಡುವಂತೆ ಮತ್ತು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ಈ ಭವನ ನಿರ್ಮಾಣದಿಂದ ಗ್ರಾಮದ ಅಭಿವೃದ್ಧಿಗೆ ಹೊಸ ಆಯಾಮ ದೊರೆಯಲಿ ಎಂದು ಆಶಿಸುತ್ತೇನೆ ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷರಾದ ಯುವರಾಜ್‌ ಕದಂ, ಬಾಹುಕು ಮಾಸೆಕರ್, ಬಾಳು ದೇಸೂರಕರ್, ಮನೋಹರ್ ಬೆಳಗಾಂವ್ಕರ್, ಮಹೇಶ ಪಾಟೀಲ, ನಿಂಗಪ್ಪ ಮೋರೆ, ಡಾಕಲು ಪಾಟೀಲ, ಶಿವಾಜಿ ಬೊಕಡೆ, ಲಕ್ಷ್ಮೀ ಪಾಟೀಲ, ಪೂಜಾ ಸುತಾರ, ಗಾಯತ್ರಿ ಸುತಾರ, ಕಾಶಿನಾಥ ಮೋರೆ ಮಂಜುಳಾ ಕಾಂಬಳೆ, ಶ್ರೀಕಾಂತ ಪಾಟೀಲ, ಜಯವಂತ ಮೋರೆ, ಪರಶುರಾಮ ಕೀಣೆಕರ್, ಅರುಣ ಪಾಟೀಲ, ಗುಂಡು ಪಾಟೀಲ, ಡಿ.ಎಚ್ ಮಾಳಗಿ, ರವಿಕಾಂತ ಪಿಡಿಒ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button