*ಜನರ ವಿಶ್ವಾಸವೇ ನನ್ನ ಶಕ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಡಾ.ಬಾಬಾಸಾಹೇಬ ಅಂಬೇಡ್ಕರ್ ಉದ್ಯಾನವನ ಉದ್ಘಾಟಿಸಿದ ಸಚಿವರು
ಪ್ರಗತಿವಾಹಿನಿ ಸುದ್ದಿ: ಯಾವುದೇ ವ್ಯಕ್ತಿ, ಜಾತಿ, ಪ್ರದೇಶಕ್ಕಷ್ಟೇ ಸೀಮಿತವಲ್ಲ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸಹ್ಯಾದ್ರಿ ನಗರದಲ್ಲಿ ಭಾರತ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಉದ್ಯಾನವನ ಉದ್ಘಾಟಿಸಿ ಮಾತನಾಡಿದ ಸಚಿವರು, ಆರೋಗ್ಯ ಶಿಕ್ಷಣ, ಕೃಷಿ, ಮೂಲಭೂತ ಸೌಲಭ್ಯ, ಸಾಂಸ್ಕೃತಿಕ ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಮಾಡುತ್ತಿದ್ದೇನೆ ಎಂದರು.
ಯಾವುದೇ ಸರ್ಕಾರ ಇರಲಿ, ಕೆಲಸ ಮಾಡಿಸಿಕೊಂಡು ಬರುವ ಶಕ್ತಿಯನ್ನು ನೀವು (ಜನರು) ನನಗೆ ಕೊಟ್ಟಿದ್ದೀರಿ. ನಿಮ್ಮಿಂದಾಗಿ ನನಗೆ ಗೌರವ, ಕ್ಷೇತ್ರದ ಕೆಲಸವನ್ನು ತಲೆ ಮೇಲೆ ಹೊತ್ತುಕೊಂಡು ಮಾಡುತ್ತೇನೆ ಎಂದು ಸಚಿವರು ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 151 ದೇವಸ್ಥಾನ ಕಟ್ಟಿಸಿದ್ದೇನೆ. ಎಲ್ಲರನ್ನೂ ಸೇರಿಸಿಕೊಂಡು ಕೆಲಸ ಮಾಡುತ್ತಿದ್ದೇನೆ. ಕೆಲವರು ಚುನಾವಣೆ ಹತ್ತಿರ ಬಂದಾಗ ಬರುತ್ತಾರೆ. ಅಂತಹ ವ್ಯಕ್ತಿಗಳಿಂದ ಕ್ಷೇತ್ರದ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕ್ಷೇತ್ರವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗೋಣ, ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡುವೆ. ಜನರ ವಿಶ್ವಾಸವೇ ನನ್ನ ಶಕ್ತಿ. ಕ್ಷೇತ್ರದ ಅಭಿವೃದ್ಧಿಗೋಸ್ಕರ ಜೊತೆಗೆ ನಿಲ್ಲಿ, ಕ್ಷೇತ್ರ ಶಾಂತಿಯ ತೋಟ, ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಹೋಗುತ್ತೇನೆ ಎಂದರು.
ಈ ವೇಳೆ ಕಾಡಾ ಅಧ್ಯಕ್ಷರಾದ ಯುವರಾಜ್ ಕದಂ, ನಾಮದೇವ ಹಟ್ಟಿ, ಎಂ.ಎನ್ ಕಾಡಾಪೂರೆ, ಬಾಳು ದೇಸೂರಕರ್, ಶಂಕರ ಶಿಂಧೆ, ವನಿತಾ ಗೊಂದಳಿ, ಪ್ರೇಮಾ ಅಸೂದಿ, ಸುಕುಮ ಬಕವಾಡ, ಸುಬ್ರಹ್ಮಣ್ಯ ಕಾಂಬಳೆ, ಚಂದ್ರಕಾಂತ ಬೋಸಲೆ, ಮುಸ್ತಾಕ ಮುಲ್ಲಾ, ಕೃಷ್ಣ ಹಣಬೂರ, ಸಂಜಯ್ ದೇಸಾಯಿ ಮುಂತಾದವರು ಉಪಸ್ಥಿತರಿದ್ದರು.



