CrimeKannada NewsNational

*ಸ್ನೇಹಿತನನ್ನೇ ಕೊಂದು ಆತನ ಮನೆಯನ್ನೇ ಲೂಟಿ ಮಾಡಿದ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ: ವ್ಯಕ್ತಿಯೊಬ್ಬ ಸ್ನೇಹಿತನನ್ನೇ ಕೊಂದು ಆತನ ಮನೆಯನ್ನೇ ಲೂಟಿ ಮಾಡಿದ್ದು  ಪೊಲೀಸರು ಎನ್​ಕೌಂಟರ್​ ನಡೆಸಿ ಗ್ಯಾಂಗ್​ನ ನಾಯಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹರಿಯಾಣದ ಸೋನಿಪತ್​ನಲ್ಲಿ ಈ ಘಟನೆ ನಡೆದಿದೆ. ಶೇಖರ್ ಹಾಗೂ ಸಾಹಿಲ್ ಆತ್ಮೀಯ ಸ್ನೇಹಿತರಾಗಿದ್ದರು. ಇಂದು ದಿನ ರಾತ್ರಿ ಶೇಖರ್​ ಗ್ಯಾಂಗ್ ಸಾಹಿಲ್ ಮನೆಗೆ ನುಗ್ಗಿತ್ತು, ದರೋಡೆ ಮಾಡಲು ಮುಂದಾಗಿತ್ತು ಆಗ ಸಾಹಿಲ್ ತಡೆದಿದ್ದಕ್ಕೆ ಆತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಬಳಿಕ ಆಭರಣವನ್ನು ದೋಚಿದ್ದರು.

ತನಿಖೆ ನಡೆಸಿದ ಪೊಲೀಸರು ಎನ್ಕೌಂಟರ್​ ನಡೆಸಿ ಗ್ಯಾಂಗ್​ನ ನಾಯಕ ಶೇಖರ್ ಹಾಗೂ ಶಫೀಕ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಶೇಖರ್ ಮತ್ತು ಶಫೀಕ್ ಎನ್‌ಕೌಂಟರ್ ಸಮಯದಲ್ಲಿ, ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದರು, ಆಗ ಪೊಲೀಸರು ಶೇಖರ್ ಮತ್ತು ಶಫೀಕ್ ಅವರ ಕಾಲಿಗೆ ಗುಂಡು ಹಾರಿಸಲಾಯಿತು. ಇಬ್ಬರೂ ಪ್ರಸ್ತುತ ಸೋನಿಪತ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Home add -Advt

ಈ ಪ್ರಕರಣದಲ್ಲಿ ಸೋನಿಪತ್ ಅಪರಾಧ ವಿಭಾಗದ ತಂಡಗಳು ಮತ್ತೊಬ್ಬ ಆರೋಪಿ ಶಹನವಾಜ್‌ನನ್ನು ಬಂಧಿಸಿವೆ. ಶಹನವಾಜ್ ಬಂಧನದ ನಂತರ, ಅಪರಾಧ ವಿಭಾಗದ ತಂಡಗಳು ಇತರ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದವು. 

ಹಿರಿಯ ಸೋನಿಪತ್ ಪೊಲೀಸ್ ಅಧಿಕಾರಿಗಳು ಎನ್‌ಕೌಂಟರ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದರು.

ಗಾಯಗೊಂಡ ಇಬ್ಬರು ಆರೋಪಿಗಳ ಬಳಿಯಿಂದ ಎರಡು ಅಕ್ರಮ ದೇಶೀಯ ಪಿಸ್ತೂಲ್‌ಗಳನ್ನು ಸಹ ಅಪರಾಧ ವಿಭಾಗದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇತರ ಮೂವರು ಆರೋಪಿಗಳಿ ಹುಟುಕಾಟಕ್ಕೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Articles

Back to top button