
ಪ್ರಗತಿವಾಹಿನಿ ಸುದ್ದಿ: ಸಂಗೋಳ್ಳಿ ರಾಕ್ ಗಾರ್ಡನ್ ನೋಡಲು ತೆರಳುವಾಗ ರಿಕ್ಷ ಪಲ್ಟಿಯಾಗಿ ಯುವಕನೋರ್ವ ದುರ್ಮರಣ ಹೊಂದಿದ್ದಾನೆ.
ರಾಮದುರ್ಗ ತಾಲೂಕಿನ ಸುನ್ನಾಳ ಗ್ರಾಮದಿಂದ ಬೈಲಹೊಂಗಲ ತಾಲೂಕಿನ ಸಂಗೋಳ್ಳಿ ರಾಕ್ ಗಾರ್ಡನ್ ನೋಡಲು ರಿಕ್ಷಾದಲ್ಲಿ ತೆರಳಿದ್ದ ಯುವಕ ಮಂಜುನಾಥ ನಾಗಪ್ಪಾ ಮುರಗಟ್ಟಿ ಎಂಬಾತ ರಿಕ್ಷಾ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.
ಬೈಲಹೊಂಗಲ ಪೊಲೀಸ ಠಾಣಾ ವ್ಯಾಪ್ತಿಯ ಕೆಂಗಾನೂರ ಸಂಗೋಳ್ಳಿ ರಸ್ತೆಯ ಮೇಲೆ ಅಪಘಾತವಾಗಿದ್ದು, ರಿಕ್ಷಾ ಚಾಲಕ ಅತಿವೇಗಿದ ಚಾಲನೆ ಮಾಡಿದ್ದೆ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ. ಅಪಘಾತದ ವೇಳೆ ಮಂಜುನಾಥ ನಾಗಪ್ಪಾ ಮುರಗಟ್ಟಿ (19) ಗೆ ಬಲಗಾಲಿಗೆ, ಹೊಟ್ಟೆಗೆ ಗಂಭಿರ ಗಾಯಗಳಾಗಿದ್ದು ಚಿಕಿತ್ಸೆ ಫಲಿಸದೆ ಯುವಕ ಸಾವನ್ನಪ್ಪಿದ್ದಾನೆ. ಅಪಘಾತದ ವೇಳೆ ಆಟೋ ಚಾಲಕ ಓಡಿಹೋಗಿದ್ದಾನೆ.
ಈ ಬಗ್ಗೆ ಬೈಲಹೊಂಗಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬೈಲಹೊಂಗಲ ಪೊಲೀಸರು ಭೇಟಿ ನೀಡಿ ತನಿಖೆಯನ್ನು ಕೈಗೊಂಡಿದ್ದಾರೆ.



