Belagavi NewsBelgaum NewsCrimeKannada NewsKarnataka NewsNational

*ಬೈಕ್ ಮೇಲಿಂದ ಬಿದ್ದು ವ್ತಕ್ತಿ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸವದತ್ತಿ ತಾಲೂಕಿನ ನರಗುಂದ ಮುನವಳ್ಳಿ ರಸ್ತೆ ಮೇಲೆ ಆಚಮಟ್ಟಿ ಕ್ರಾಸ್ ಬಳಿ ಬೈಕ್ ಅಪಘಾತಕ್ಕೀಡಾಗಿದ್ದು, ಬೈಕ್ ಸವಾರ ಸಾವನ್ನಪ್ಪಿದ್ದಾನೆ.‌

ಭೀಮಪ್ಪ ಮೆಗುಂಡೆಪ್ಪ ಖನಗಾಂವಿ (42) ಸಾವನ್ನಪ್ಪಿದ್ದ ವ್ಯಕ್ತಿ. ನರಗುಂದ ಕಡೆಯಿಂದ ಮುನವಳ್ಳಿ ಕಡೆಗೆ ವೇಗದಿಂದ ಬೈಕ್ ಚಲಾಯಿಸಿಕೊಂಡು ಬಂದು ಬಿದ್ದು ತನ್ನ ತಲೆಗೆ, ಹಣೆಗೆ, ಮುಖಕ್ಕೆ ಮತ್ತು ಮೂಗಿಗೆ ಗಂಭೀರಗಾಯವಾಗಿತ್ತು.‌ ಆದರೆ ಚಿಕಿತ್ಸೆ ಫಲಿಸದೆ ಬೈಕ್ ಸವಾರ ಸಾವನ್ನಪ್ಪಿದ್ದಾನೆ. 

ಈ ಬಗ್ಗೆ ಮೃತನ ತಾಯಿ ಸವದತ್ತಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.‌ ಸವದತ್ತಿ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

Home add -Advt
https://pragativahini.com/exhibition-opens-at-bus

Related Articles

Back to top button