*ಜಾತಿ ನಿರ್ಮೂಲನೆಗೆ ಶ್ರಮಿಸಿದವರು ವೇಮನರು: ಡಾ. ಪಿ.ಜಿ ಕೆಂಪನ್ನವರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವೇಮನರು ಬೆಳೆದು ಬಂದ ದಾರಿಯಲ್ಲಿ ನಾವು ನಡೆಯಬೇಕು. ಅನೇಕ ಮಹನೀಯರಲ್ಲಿ ವೇಮನರು ಒಬ್ಬರು, ವೇಮನರು ಕೇವಲ ರೆಡ್ಡಿ ಸಮುದಾಯಕ್ಕೆ ಮಾತ್ರ ಸೇರಿದವರಲ್ಲ ಎಲ್ಲ ಸಮಾಜಕ್ಕೆ ಸೇರಿದವರು. ಅಂದಿನ ಕಾಲಘಟ್ಟದಲ್ಲಿ ವೇಮನರು ಜಾತಿ ನಿರ್ಮೂಲನೆಗೆ ಶ್ರಮಿಸಿದರು ಎಂದು ರಾಜ ಲಖಮಗೌಡ ಕಾನೂನು ಮಹಾ ವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾದ ಡಾ. ಪಿ.ಜಿ ಕೆಂಪನ್ನವರ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ಸೋಮವಾರ (ಜ.19) ನಗರದ ರೆಡ್ಡಿ ಸಭಾ ಭವನದಲ್ಲಿ ನಡೆದ ಮಹಾಯೋಗಿ ವೇಮನ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೇಮನ ತೆಲುಗು ಭಾಷೆಯ ಶ್ರೇಷ್ಠ ಕವಿ. ವೇಮನರ ವಚನಗಳು ಮುಂದಿನ ಪೀಳಿಗೆಗೆ ಅರಿತು ಮುಂದೆನಡೆಯಬೇಕಾಗಿದೆ. ವೇಮನರ ವಚನಗಳ ಕುರಿತು ಯುವಕರಲ್ಲಿ ಅರಿವು ಬರಬೇಕು. ಜೀವನದಲ್ಲಿ ಯಾರು ಏನು ತೆಗೆದುಕೊಂಡು ಹೋಗಲು ಸಾಧ್ಯ ವಿಲ್ಲ ಅದರಿಂದ ಇಂತ ಮಹನೀಯರ ಆದರ್ಶಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವೇಮನ ಒಬ್ಬ ಕವಿ ಯಾಗಿ ತತ್ವಜ್ಞಾನಿಯಾಗಿ ಆದರ್ಶ ವ್ಯಕ್ತಿಯಾಗಿ ಬಾಳಿದವರು. ಅಂತರಂಗ ಶುದ್ಧಿಗಾಗಿ ಇಂತಹ ಮಹನೀಯರ ಆದರ್ಶಗಳನ್ನ ನಾವು ಪಾಲಿಸಬೇಕು ಎಂದು ಡಾ. ಪಿ.ಜಿ ಕೆಂಪನ್ನವರ ಉಪನ್ಯಾಸ ನೀಡಿದರು.
ರೆಡ್ಡಿ ಸಂಘ ಅಧ್ಯಕ್ಷರಾದ ರಾಮಣ್ಣ ಮುಳ್ಳೂರು ಮಾತನಾಡಿ ಇವತ್ತಿನ ದಿನ ರೆಡ್ಡಿ ಸಮುದಾಯದ ಶ್ರೇಷ್ಠ ದಿನವಾಗಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಮಾಜದ ಮುಖಂಡರಾದ ಬಸವರಾಜ ಜಗಜಂಪಿ, ರಾಮಕೃಷ್ಣ ಮರಾಠಿ, ಪ್ರೋ. ಎಂ.ಎಸ್ ಇಂಚಲ್, ಇಂದಿರಾ ಮಳಲಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
ಇದಕ್ಕೂ ಮುಂಚೆ ಯರಗಟ್ಟಿ ಮುಗಳಿಹಾಳ ಶ್ರೀ ಸೋಮಲಿಂಗ ಶಾಸ್ತ್ರಿಗಳು ಅವರು ವೇಮನ ವಚನ ಕಲಿತರೇ ಜೀವನ ಪಾವನ. ನಿಮ್ಮ ಮಕ್ಕಳಿಗೆ ವೇಮನ ವಚನ ಕಲಿಸಿರಿ. ರೆಡ್ಡಿ ಕುಲದ ಶ್ರೇಷ್ಠ ವ್ಯಕ್ತಿ ವೇಮನ. ಎಲ್ಲಾ ತಾಯಿಂದರು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಇದರಿಂದ ಸಮಾಜ ಅಭಿವೃದ್ಧಿ ಸಾಧ್ಯ ವೇಮನರ ವಚನಗಳನ್ನು ತಿಳಿಸಿದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಶ್ರೀ ವೇಮನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಗೌರವ ನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಲಕ್ಷ್ಮಣ ಚಿಂಗಳೆ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಸೇರಿದಂತೆ ಸಮಾಜದ ಗಣ್ಯರು, ಮುಖಂಡರುಗಳು ಉಪಸ್ಥಿತರಿದ್ದರು.

