*ಲಕ್ಷ ಲಕ್ಷ ಟ್ಯಾಕ್ಸ್ ವಂಚನೆ: ಹೈಟೆಕ್ ಬಸ್ ಗಳಿಗೆ ಶಾಕ್ ನೀಡಿದ ಸಾರಿಗೆ ಇಲಾಖೆ*

ಪ್ರಗತಿವಾಹಿನಿ ಸುದ್ದಿ: ಸಾರಿಗೆ ಇಲಾಖೆಗೆ ಲಕ್ಷ ಲಕ್ಷ ಟ್ಯಾಕ್ಸ್ ವಂಚನೆ ಮಾಡುತ್ತಿದ್ದ ಖಾಸಗಿ ಬಸ್ ಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಸೀಜ್ ಮಾಡಿ ಬಿಸಿ ಮುಟ್ಟಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಖಾಸಗಿ ಬಸ್ ಹಾಗೂ ಇತರೆ ವಾಹನಗಳು ಟ್ಯಾಕ್ಸ್ ಕಟ್ಟುತ್ತಿಲ್ಲ. ಇದರಿಂದ ಸಾರಿಗೆ ಇಲಾಖೆಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗ್ತಿದೆ. ಇದೀಗ ಸಾರಿಗೆ ಇಲಾಖೆ ಅಪರ ಆಯುಕ್ತ ಎಂ.ಪಿ ಓಂಕಾರೇಶ್ವರಿ ನೇತೃತ್ವದ ತಂಡ ಫೀಲ್ಟ್‌ಗೆ ಇಳಿದಿದೆ. ತೆರಿಗೆ ವಂಚಕರ ವಿರುದ್ಧ ಸಮರ ಸಾರಿದೆ.
ಟ್ಯಾಕ್ಸ್ ವಂಚನೆ ಮಾಡಿದವ್ರನ್ನ ಪತ್ತೆ ಹಚ್ಚಿ ನೂರಾರು ಬಸ್‌ಗಳನ್ನ ಸೀಜ್ ಮಾಡಲಾಗಿದೆ. ಕಳೆದ 5-6 ತಿಂಗಳಲ್ಲಿ 2 ಕೋಟಿಯಷ್ಟು ಟ್ಯಾಕ್ಸ್ ಹಣವನ್ನ ವಸೂಲಿ ಮಾಡಲಾಗಿದೆ. ಸುಮಾರು ದಿನಗಳಿಂದ ಟ್ಯಾಕ್ಸ್ ಕಟ್ಟದೇ ಕಾರ್ಯಾಚರಣೆ ಮಾಡ್ತಿದ್ದ ಬಸ್‌ಗಳನ್ನ ಸೀಜ್ ಮಾಡಲಾಗಿದೆ. ಸೀಜ್ ಮಾಡಿದ ಕೆಲ ಬಸ್‌ಗಳನ್ನ ಆರ್‌ಟಿಓ ಕಚೇರಿ, ಪೊಲೀಸ್ ಠಾಣೆಗಳ ಆವರಣದಲ್ಲಿ ಪಾರ್ಕ್ ಮಾಡಲಾಗಿದೆ.
ಸೀಜ್ ಮಾಡಿದ ನೂರಾರು ವಾಹನಗಳನ್ನು ನಿಲ್ಲಿಸೋಕೆ ದೇವನಹಳ್ಳಿ ಸಮೀಪ ಇಲಾಖೆಯಿಂದ ಸೀಜರ್ ಯಾರ್ಡ್ ಎಂಬ ಪ್ರತ್ಯೇಕ ವ್ಯವಸ್ಥೆಯನ್ನೇ ಮಾಡಲಾಗಿದೆ. ಸಾರಿಗೆ ಇಲಾಖೆಯ ಕಾರ್ಯಾಚರಣೆಯಿಂದ ಕೆಲ ಮಾಲೀಕರು ಟ್ಯಾಕ್ಸ್ ಕಟ್ಟೋದಕ್ಕೆ ಮುಂದೆ ಬರ್ತಿದ್ದಾರೆ.



