Belagavi NewsBelgaum NewsKannada NewsKarnataka News

*ಜ. 26 ರಂದು ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪ್ರದಾನ ಸಮಾರಂಭ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ಗಜೇಂದ್ರಗಡ ವತಿಯಿಂದ ಸಂಗೊಳ್ಳಿ ರಾಯಣ್ಣನವರ 195ನೇ ಹುತಾತ್ಮ ದಿನದ ನಿಮಿತ್ತ ಜ.26 ರಂದು ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ “ರಾಜ್ಯಮಟ್ಟದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಸಸ್ತಿ ಸಮಾರಂಭ ಹಾಗೂ ಸಾಂಸ್ಕೃತಿಕ ಸಂಜೆ” ಕಾರ್ಯಕ್ರಮ ಜರುಗಲಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ಅಧ್ಯಕ್ಷ ಹೆಚ್.ಎಸ್. ಸೋಂಪೂರ ಅವರು ತಿಳಿಸಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5. 30ಕ್ಕೆ ಧಾರವಾಡ ರೇವಣಸಿದ್ದೇಶ್ವರ ಪೀಠದ ಜಗದ್ಗುರುಗಳಾದ ಶ್ರೀ ಬಸವರಾಜ್ ದೇವರು, ಕಿತ್ತೂರು ಕಲ್ಮಠದ  ಶ್ರೀ ರಾಜಗುರು ಮಡಿವಾಳ ಮಹಾಸ್ವಾಮಿಗಳು, ರುದ್ರಸ್ವಾಮಿಮಠದ ಚನ್ನಬಸವ ದೇವರು, ನಂದಗಾಡದ ವಿರಕ್ತಿ ಮಠದ ಚನ್ನವೀರ ದೇವರ ಸಾನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.

ಅದರಂತೆ ಕಾನೂನು ಸಂಸದೀಯ ವ್ಯವಹಾರ, ಪ್ರವಾಸೋದ್ಯಮ ಹಾಗೂ ಗಡಿನಾಡ ಸಚಿವ ಎಚ್. ಕೆ. ಪಾಟೀಲ ಅವರು ಭುವನೇಶ್ವರಿ ದೇವಿಯ ಭಾವಚಿತ್ರ ಅನಾವರಣಗೊಳಿಸುವರು. ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಕಿತ್ತೂರ ರಾಣಿ ಚನ್ನಮ್ಮನವರ ಭಾವಚಿತ್ರ ಹಾಗೂ ಶಾಸಕ ದೊಡ್ಡನಗೌಡ ಎಚ್.ಪಾಟೀಲ ಅವರು ಸಂಗೊಳ್ಳಿ ರಾಯಣ್ಣನವರ ಭಾವಚಿತ್ರ ಅನಾವರಣಗೊಳಿಸುವರು.

ಶಾಸಕ ಹಾಗೂ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ‌.ಎಸ್.ಪಾಟೀಲ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜೊತೆಗೆ ಶಾಸಕ ವಿಠ್ಠಲ ಹಲಗೆಕರ್, ಮಾಜಿ ಶಾಸಕರಾದ ಡಾ. ಅಂಜಲಿ ನಿಂಬಾಳಕರ್, ಅರವಿಂದ ಪಾಟೀಲ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

Home add -Advt

ಕಾರ್ಯಕ್ರಮದಲ್ಲಿ ಸಮಾಜಮುಖಿ ಕೆಲಸ ಮಾಡಿದ 50 ಜನರನ್ನು ಗುರುತಿಸಿ, ಅವರಿಗೆ ರಾಯಣ್ಣ ಗೌರವ ಪುರಸ್ಕಾರ ನೀಡಲಾಗುವುದು. ವಿಶೇಷವಾಗಿ ಒಬ್ಬರಿಗೆ ರಾಜ್ಯಮಟ್ಟದ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪ್ರಧಾನ ಮಾಡಲಿದ್ದೇವೆ. ಜೊತೆಗೆ ಮಂಗಳೂರಿನ ಪ್ರಸಿದ್ಧ ಹೆಜ್ಜೆನಾದ ತಂಡದವರಿಂದ ನೃತ್ಯ, ಹೆಸರಾಂತ ಗಾಯಕಿ ಸಾದ್ವಿನ ಕೊಪ್ಪ ಇವರಿಂದ ಗಾಯನ, ಕಲಾವಿದ ಹನುಮಂತ ಬಟ್ಟೂರ್ ಅವರಿಂದ ಜಾನಪದ ಗಾಯನ, ಕೊಪ್ಪಳದ ಭಾಷಾ ಕಿನ್ನೂರ ತಂಡದವರಿಂದ ನಾಡಗೀತೆ ನೆರವೇರಲಿದೆ ಎಂದು ವಿವರಿಸಿದರು.

ಕರವೇ ಜಿಲ್ಲಾ ಅಧ್ಯಕ್ಷ ದೀಪಕ ಗುಡಗನಟ್ಟಿ  ಮಾತನಾಡಿ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಸ್ಮರಣಾರ್ಥವಾಗಿ ಪ್ರತಿ ವರ್ಷ ಜ.26 ರಂದು ಗದಗಿನ ಗಜೇಂದ್ರಗಡದಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿತ್ತು, ಆದರೆ, ಈ ಬಾರಿ ನಮ್ಮ ಕರೆಗೆ ಸ್ಪಂದಿಸಿ, ಬೆಳಗಾವಿಯ ನಂದಗಡ ಗ್ರಾಮದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಸಂತಸ ತಂದಿದೆ, ನಂದಗಡ ಗ್ರಾಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಯಣ್ಣನ ಅಭಿಮಾನಿಗಳು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

Related Articles

Back to top button