*ಬೆಳಗಾವಿಯಲ್ಲಿ ಇಬ್ಬರು ಮಕ್ಕಳೊಂದಿಗೆ ಕಾಣಿಯಾದ ಮಹಿಳೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಬ್ಬರು ಮಕ್ಕಳೊಂದಿಗೆ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೊರಟ ಮಹಿಳೆ ನಾಪತ್ತೆಯಾಗಿದ್ದಾರೆ.
3 ವರ್ಷದ ಮಗ ಮತ್ತು 7 ವರ್ಷದ ಮಗಳೊಂದಿಗೆ 31 ವರ್ಷದ ಮಹಿಳೆ ಡಿಸೆಂಬರ್ 10ರಂದೇ ಮನೆಯಿಂದ ಹೊರಟಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಖಾನಾಪುರ ತಾಲೂಕಿನ ಗುಂಜಿ ಗ್ರಾಮದ ಚರ್ಚ್ ಗಲ್ಲಿಯ ಸಾಯಮನ್ ಬೆನಿತ್ ಮಸ್ಕರೇನ್ ಇವರ ಹೆಂಡತಿ ಜನಿಫರ್ ಸಾಯಮನ್ ಮಸ್ತರೀನ್, (ವಯಸ್ಸು 31 ವರ್ಷ) ಇವಳು ಮಗ ಎಡ್ರಿಯಲ್ ಸಾಯಮನ್ ಮಸ್ಕರೀನ್, (ವಯಸ್ಸು 03 ವರ್ಷ) ಇವನಿಗೆ ಆರೋಗ್ಯ ಸರಿ ಇರದ ಕಾರಣ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಗೆ ತೊರಿಸುತ್ತೇನೆ ಎಂದು ಮಗಳು ಕಿಒನಾ ಸಾಯಮನ್ ಮಸ್ಕರೀನ್, (ವಯಸ್ಸು 7 ವರ್ಷ) ಇವಳನ್ನು ಸಹ ಜೊತೆಗೆ ಕರೆದುಕೊಂಡು ಮೂರು ಜನ ದಿನಾಂಕ: 10/12/2025 ರಂದು ಬೆಳಗ್ಗೆ 9:30 ಗಂಟೆಗೆ ಮನೆಯಿಂದ ಹೋಗಿದ್ದವರು ಮರಳಿ ಮನೆಗೆ ಬಂದಿರುವುದಿಲ್ಲ ಎಂದು ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಣೆಯಾದ ಮಹಿಳೆ ಮತ್ತು ಮಕ್ಕಳ ವಿವರ
ಜನಿಫರ್ – ವಯಸ್ಸು 31 ವರ್ಷ, ಕಪ್ಪು ಕೂದಲು, ಸಾಧಾ ಮೈಬಣ್ಣ, ಸದೃಡ ಮೈಕಟ್ಟು, ಉದ್ದ ಮುಖ, 5.3″ ಅಡಿ ಎತ್ತರ, ಮರಾಠಿ, ಕನ್ನಡ, ಹಿಂದಿ ಮತ್ತು ಇಂಗ್ಲೀಷ ಭಾಷೆ ಮಾತನಾಡುತ್ತಾಳೆ ಹಾಗೂ ಕಪ್ಪು ಬಣ್ಣದ ಚೂಡಿದಾರ ಧರಿಸಿರುತ್ತಾಳೆ.
ಈಕೆಯ ಮಗ ಎಡ್ರಿಯಲ್ ಸಾಯಮನ್ ಮಸ್ಥರೀನ್, ವಯಸ್ಸು 03 ವರ್ಷ, ಕಪ್ಪು ಕೂದಲು, ಸಾಧಾ ಮೈ ಬಣ್ಣ, ಸಡಪಾತಾಳ ಮೈಕಟ್ಟು, ಉದ್ದ ಮುಖ, 3.2″ ಅಡಿ ಎತ್ತರ, ಕೊಂಕಣಿ ಭಾಷೆ ಮಾತನಾಡುತ್ತಾನೆ. ಗುಲಾಬಿ ಬಣ್ಣದ ಟೀ ಶರ್ಟ ನೀಲಿ ಬಣ್ಣದ ಜೀನ್ಸ್ ಪ್ಯಾಂಟನ್ನು ಧರಿಸಿರುತ್ತಾನೆ.
ಮತ್ತು ಈಕೆಯ ಮಗಳು ಕುಮಾರಿ ಕಿಒನಾ ಸಾಯಮನ್ ಮಸ್ತರೀನ್, ವಯಸ್ಸು 07 ವರ್ಷ ಕಪ್ಪು ಕೂದಲು, ಸಾಧಾ ಮೈ ಬಣ್ಣ, ಸಡಪಾತಾಳ ಮೈಕಟ್ಟು, ಗುಂಡು ಮುಖ, 3.6″ ಅಡಿ ಎತ್ತರ, ಕೊಂಕಣಿ ಹಾಗೂ ಮರಾಠಿ ಭಾಷೆ ಮಾತನಾಡುತ್ತಾಳೆ.
ಕಾಣೆಯಾಗಿರುವ ಮಹಿಳೆ ಮತ್ತು ಮಕ್ಕಳ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಖಾನಾಪುರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08336222333, ಪೋಲೀಸ್ ಇನ್ಸ್ ಪೆಕ್ಟರ್ ದೂರವಾಣಿ 9480804033 ಗೆ ತಿಳಿಸಲು ಖಾನಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



