*ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ 800ಕ್ಕೂ ಅಧಿಕ ಜನರ ಸಾವು: ಪೊಲೀಸರ ಕಠಿಣ ಕ್ರಮ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ 800ಕ್ಕೂ ಅಧಿಕ ಜನ ಸಾವನ್ನಪ್ಪುತ್ತಿದ್ದು, ರಸ್ತೆ ಅಪಘಾತ ತಡೆಯಲು ಜಿಲ್ಲಾ ಪೊಲೀಸರು ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ವಾಹನ ಚಾಲಕರು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ನ್ಯಾಯಾಲಯದ ಆದೇಶದಂತೆ ಹೆಚ್ಚಿನ ಡೆಸಿಬಲ್ ಶಬ್ದ ಮಾಲಿನ್ಯ ಮಾಡುವಂತಹ ಟ್ರ್ಯಾಕ್ಟರ್ಗಳ ಕಾನೂನು ಕ್ರಮ ಜರುಗಿಸಲಾಗುತ್ತಿದೆ.
ಕಲಂ 190 (2) ಮೋಟಾರ ವಾಹನ ಕಾಯ್ದೆ ಅಡಿಯಲ್ಲಿ ರಸ್ತೆ ಸುರಕ್ಷತೆ, ಶಬ್ದ ಮಾಲಿನ್ಯ ವಾಯು ಮಾಲಿನ್ಯಕ್ಕೆ ಸಂಬಂಧಿಸಿದಂತೆ ನಿಗಧಿಪಡಿಸಲಾದ ಮಾನದಂಡಗಳನ್ನು ಉಲ್ಲಂಘಿಸುವ ಯಾವುದೇ ಸಾರ್ವಜನಿಕರ ಸ್ಥಳಗಳಲ್ಲಿ ಮೋಟಾರು ವಾಹನಗಳನ್ನು ಚಾಲನೆ ಮಾಡುವ ಅಥವಾ ಓಡಿಸುವ ಯಾವುದೇ ವ್ಯಕ್ತಿಗೆ ಮೂರು ತಿಂಗಳು ಜೈಲು ಶಿಕ್ಷೆ ಅಥವಾ 10 ಸಾವಿರ ರೂ ಗಳ ವಿಸ್ತರಿಸಬಹುದಾದ ದಂಡ ಅಥವಾ ಎರಡನ್ನು ವಿಧಿಸಲಾಗುತ್ತದೆ.
ಕಲಂ 190 (3) ಮೋಟಾರ ವಾಹನ ಕಾಯ್ದೆ ಅಡಿಯಲ್ಲಿ ಅಪಾಯಕಾರಿ ಸ್ವಭಾವದ ಸರಕುಗಳ ಸಾಗಣೆಗೆ ನಿಯಮಗಳನ್ನು ಉಲ್ಲಂಘಿಸುವ ಮೋಟಾರು ವಾಹನವನ್ನು ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಚಾಲನೆ ಮಾಡುವ ಅಥವಾ ಓಡಿಸಲು ಕಾರಣವಾಗುವ ವ್ಯಕ್ತಿಗೆ ಮೊದಲ ಅಪರಾಧಕ್ಕೆ 10 ಸಾವಿರ ರೂ ದಂಡದೊಂದಿಗೆ ಮತ್ತು 3 ತಿಂಗಳ ಅವಧಿಗೆ ಪರವಾನಿಗೆ ಹೊಂದಲು ಅನರ್ಹನಾಗುತ್ತಾನೆ. ಅಥವಾ ಒಂದು ವರ್ಷ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ಎರಡನ್ನು ವಿಸ್ತರಿಸಬಹುದಾಗಿದೆ. ಮತ್ತು ಯಾವುದೇ ಎರಡನೇ ಅಥವಾ ನಂತರದ ಅಪರಾಧಕ್ಕೆ 20 ಸಾವಿರ ರೂ ದಂಡ ಅಥವಾ ಮೂರು ವರ್ಷಗಳ ವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ಎರಡನ್ನು ವಿಧಿಸಬಹುದಾಗಿದೆ.
ಪರಿಸರ ಮಾಲಿನ್ಯ ತಡೆಯುವುದು. ನಿಯಂತ್ರಿಸುವುದು ಮತ್ತು ಶಮನ ಕಾಯ್ದೆ-1986 (The Environment Protection Act-1986), ನಿಯಮ 15 ನೇದ್ದರಡಿಯಲ್ಲಿ ಉಲ್ಲಂಘನೆ ಮಾಡಿದವರ ಮೇಲೆ 5 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 1 ಲಕ್ಷ ರೂ ಗಳ ವರೆಗೆ ದಂಡ ಅಥವಾ ಎರಡೂ.
ಶಬ್ದ ಮಾಲಿನ್ಯ ನಿಯಮಗಳು (Noise Pollution Regulation and Control Rules-2000) ನಿಯಮ 5 ರಡಿಯಲ್ಲಿ ಧ್ವನಿ ಉದ್ಘೋಷಕಗಳು, ಪಬ್ಲಿಕ್ ಅಡ್ರೆಸ್ ಸಿಸ್ಟಮ್ಗಳು ಅಥವಾ ಅಂತಹ ಸಾಧನಗಳನ್ನು ಅನುಮತಿಯಿಲ್ಲದೆ ಬಳಸುವುದನ್ನು ನಿಷೇಧಿಸಿದೆ.
ನಿಯಮ 7 ರಡಿಯಲ್ಲಿ ಶಬ್ದದ ಮಟ್ಟ ಪರಿಸರದ ಮಾನದಂಡಗಳಿಗಿಂತ 10 ಡಿಸೆಬಲ್ ಅಥವಾ ಅದಕ್ಕಿಂತ ಹೆಚ್ಚು ಇದ್ದಾಗ. ನಿಯಮ 8 ರಡಿಯಲ್ಲಿ ಸಾರ್ವಜನಿಕರಿಗೆ ಅಥವಾ ಸಮೀಪದ ಆಸ್ತಿಯಲ್ಲಿ ವಾಸಿಸುತ್ತಿರುವವರಿಗೆ ತೊಂದರೆ, ಧ್ವನಿ ಅಥವಾ ಅಂತಹ ಅಪಾಯ ತಡೆಯಲು ಆಗತ್ಯವೆಂದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು.
ಕಲಂ 36 ಕರ್ನಾಟಕ ಪೊಲೀಸ್ ಕಾಯ್ದೆ-1963 ರಡಿಯಲ್ಲಿ ಅತಿಯಾದ ಶಬ್ದ ಅಥವಾ ಗದ್ದಲವು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದರೆ ಅದನ್ನು ನಿಯಂತ್ರಿಸಲು ಅಥವಾ ನಿಲ್ಲಿಸಲು ಪೊಲೀಸರು ಆದೇಶಿಸಬಹುದು.
ಕಲಂ 184 ಮೋಟಾರ ವಾಹನ ಕಾಯ್ದೆ ಅಡಿಯಲ್ಲಿ ಅಪಾಯಕಾರಿ ರೀತಿಯಲ್ಲಿ ವಾಹನವನ್ನು ನಡೆಸಿದರೆ ಮೊದಲ ಅಪರಾಧಕ್ಕೆ ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಶಿಕ್ಷೆ ಅಥವಾ 1000 ರೂ ವರೆಗೆ ದಂಡ ಅಥವಾ ಎರಡೂ. ಎರಡನೇ/ನಂತರದ ಅಪರಾಧಕ್ಕೆ 2 ವರ್ಷಗಳ ವರೆಗೆ ವಿಸ್ತರಿಸಬಹುದಾದ ಶಿಕ್ಷೆ ಅಥವಾ 10 ಸಾವಿರ ರೂ ವರೆಗೆ ದಂಡ ಅಥವಾ ಎರಡೂ.
ಕಲಂ 281 ಬಿಎನ್ಎಸ್ ಕಾಯ್ದೆ-2023 ನೇದ್ದರ ಅಡಿಯಲ್ಲಿ ನಿರ್ಲಕ್ಷತನ ಹಾಗೂ ಬೇಜಾವಾಬ್ದಾರಿತನವಾಗಿ ವಾಹನ ಚಾಲನೆಗೆ 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 1000 ರೂ ದಂಡ ಅಥವಾ ಎರಡೂ.
ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ, ಉಲ್ಲಂಘನಾದಾರರ ವಿರುದ್ಧ ಅಥವಾ ವಾಹನಗಳ ವಿರುದ್ಧ ಕಾನೂನು ರಿತ್ಯ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


