Belagavi NewsBelgaum NewsKannada NewsKarnataka NewsPolitics

*ನಕಲಿ ವ್ಯಕ್ತಿಗಳಿಂದ ಆಸ್ತಿ ವಂಚನೆ ತಡೆಯಲು ಬೆಳಗಾವಿ ಡಿಸಿ ಮಾಸ್ಟರ್ ಪ್ಲಾನ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಜಿಲ್ಲೆಯಲ್ಲಿ ಆಸ್ತಿ ನೊಂದಣಿ ಪ್ರಕ್ರಿಯೆಯಲ್ಲಿ ನಕಲಿ ವ್ಯಕ್ತಿಗಳ ಕೈವಾಡ, ನಕಲಿ ದಾಖಲೆಗಳ ಮೂಲಕ ಆಸ್ತಿ ವರ್ಗಾವಣೆ, ಸರ್ಕಾರಿ ಹಾಗೂ ಸಾರ್ವಜನಿಕ ಆಸ್ತಿಗಳ ಅನಧಿಕೃತ ನೋಂದಣಿ ಪ್ರಕರಣಗಳು ಜರಗುತ್ತಿರುವುದು ಕಂಡು ಬಂದಿದ್ದು, ವಂಚನೆಗಳನ್ನು ತಡೆಗಟ್ಟಲು ಆಧಾರ ದೃಢೀಕರಣ ಕಡ್ಡಾಯಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮೊಹಮ್ಮದ್ ರೋಷನ್ ಅವರು ಆದೇಶ ಹೊರಡಿಸರುತ್ತಾರೆ.

ಆಧಾರ್ ಆಧಾರಿತ ದೃಢೀಕರಣವು ವ್ಯಕ್ತಿತ್ವದ ಪರಿಶೀಲನೆ, ನಕಲಿ ವ್ಯಕ್ತಿತ್ವ ತಡೆಗಟ್ಟುವಿಕೆ ವಂಚನಾ ವ್ಯವಹಾರಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ.

ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶದಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button