*ಮೊದಲ ಪತಿ ಮಕ್ಕಳಿದ್ದರೂ ಎರಡನೇ ಮದುವೆಯಾದ ಮಹಿಳೆ: ಆತನನ್ನೂ ಬಿಟ್ಟು 3ನೇ ವ್ಯಕ್ತಿಯೊಂದಿಗೆ ಮತ್ತೊಂದು ವಿವಾಹ*

ಪ್ರಗತಿವಾಹಿನಿ ಸುದ್ದಿ: ಇಲ್ಲೋರ್ವ ಮಹಿಳೆ ಶೋಕಿ ಜೀವನಕ್ಕಾಗಿ ಮದುವೆಯಾಗಿ ಹಣ ದೋಚುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅಣಬೆ ಗ್ರಾಮದ ಸುಧಾರಾಣಿ ಎಂಬ ಮಹಿಳೆ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ವ್ಯಕ್ತಿಯೊಬ್ಬರನ್ನು ಪ್ರೀಟಿಸಿ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದರೂ ಆತನನ್ನು ಬಿಟ್ಟು ಎರಡನೇ ಮದುವೆಯಾಗಿ ಆತನಿಗೂ ಕೈಕೊಟ್ಟು ಮೂರನೇ ಮದುವೆಯಾಗಿದ್ದಾಳೆ ಎನ್ನಲಾಗಿದೆ.
ಸುಧಾರಾಣಿ ವೀರೆಗೌಡ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿಗೆ ಬುಲೆಟ್, ಕಾರು ಓಡಿಸಲು ಬರಲ್ಲ ಎಂದು ಕ್ಯಾತೆ ತೆಗೆದು ಗಲಾಟೆ ಮಾಅಡುತ್ತಿದ್ದ ಪತ್ನಿ, ಇಬ್ಬರು ಮಕ್ಕಳಿದ್ದರೂ ಪತಿ-ಮಕ್ಕಳನ್ನು ಬಿಟ್ಟು ಹೋಗಿದ್ದಾಳೆ.
ಬಳಿಕ ಡೆಲಿವರಿ ಬಾಯ್ ಆಗಿದ್ದ ಅನಂತಮೂರ್ತಿ ಎಂಬಾತನ ಪರಿಚಯ ಮಾಡಿಕೊಂಡು ತನ್ನ ಪತಿ ಸಾವನ್ನಪ್ಪಿದ್ದಾಗಿ ಸುಳ್ಳು ಹೇಳಿ ಆತನನ್ನು ಮದುವೆಯಾಗಿದ್ದಾಳೆ. ನೂರಾರು ಕಾರಣಗಳನ್ನು ನೀಡಿ ಆತನಿಂದ 15 ರಿಂದ 20 ಲಕ್ಷ ರೂಪಾಯಿ ಹಣ ಪಡೆದಿದ್ದಾಳಂತೆ. ಬಳಿಕ ಆತನಿಗೂ ಕೈಕೊಟ್ಟು ರಾಅಮನಗರದ ಕನಕಪುರ ಮೂಲದ ಇನ್ನೋರ್ವನನ್ನು ಮದುವೆಯಾಗಿದ್ದಾಳೆ.
ವಿಷಯ ತಿಳಿಯುತ್ತಿದ್ದಂತೆಯೇ ಮೊದಲ ಪತಿ ವೀರೆಗೌಡ ಮತ್ತು ಎರಡನೇ ಪತಿ ಅನಂತಮೂರ್ತಿ ಇಬ್ಬರೂ ಸುಧಾರಾಣಿಯವಿರುದ್ಧ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.



