Belagavi NewsBelgaum NewsKannada NewsKarnataka NewsLatest

*ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿಯೇ ಕುಸಿದು ಬಿದ್ದ ಅಪರಿಚಿತ ವ್ಯಕ್ತಿ: ಚಿಕಿತ್ಸೆ ಫಲಿಸದೇ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಪರಿಚಿತ ವ್ಯಕ್ತಿಯೊಬ್ಬರು ಆರೋಗ್ಯದಲ್ಲಿ ಏರುಪೇರಾಗಿ ಬೆಳಗಾವಿ ನಗರದ ರೈಲು ನಿಲ್ದಾಣದಲ್ಲಿಯೇ ಕುಸಿದು ಬಿದಿದ್ದು, ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ನಡೆದಿದೆ.

ಈ ಕುರಿತು ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ವ್ಯಕ್ತಿಯ ವಯಸ್ಸು ಅಂದಾಜು 65-70 ವರ್ಷ. ಬಿಳಿ ಮೈಬಣ್ಣ, ತೆಳ್ಳಗೆ, ಕೋಲು ಮುಖ, ಚೂಪಾದ ಮೂಗೂ, ಬೋಳಾದ ತಲೆ, ಬಿಳಿ ಸಣ್ಣಗೆ ದಾಡಿ ಬಿಟ್ಟಿದ್ದರು. ಕಡು ನೀಲಿ ಬಣ್ಣದ ಫುಲ್ ಶರ್ಟ್ ಧರಿಸಿದ್ದಾರೆ.

ಈ ಚಹರೆ ಪಟ್ಟಿ ಹೋಲುವ ವ್ಯಕ್ತಿಯ ಸಂಬಂಧಿಕರು ಯಾರಾದರೂ ಇದ್ದಲ್ಲಿ ಬೆಳಗಾವಿ ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ (0831) 2405273 ಪಿ.ಎಸ್.ಐ ಮೊಬೈಲ್ 9480802127 ಅಥವಾ ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ (080)22871291 ಗೆ ಸಂಪರ್ಕಿಸಬಹುದಾಗಿದೆ ಎಂದು ರೈಲ್ವೆ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button