Belagavi NewsBelgaum NewsKannada NewsKarnataka NewsLatest

*ಭೀಕರ ರಸ್ತೆ ಅಪಘಾತ: ಬೆಳಗಾವಿಯಲ್ಲಿ ಮೂವರು ಬೈಕ್ ಸವಾರರ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಾರೂಗೇರಿ ಪಟ್ಟಣದ ಅಥಣಿ-ಗೋಕಾಕ ರಸ್ತೆ ಮೇಲೆ ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿ ಹೋಡೆದ ಪರಿಣಾಮ ಬೈಕ್ ಮೇಲೆ ಸಂಚರಿಸುತ್ತಿದ್ದ ಮೂವರು ಯುವಕರು ದುರ್ಮರಣ ಹೊಂದಿದ್ದಾರೆ. 

ಗಜಾನನ ಮಹಾದೇವ ವಡೆಯರ್, ಮಾಳಪ್ಪ ಮಲ್ಲಪ್ಪ ಗೋಲಭಾಂವಿ ಹಾಗೂ ಮಹಾದೇವ ಮಲ್ಲಪ್ಪ ಗೋಲಭಾಂವಿ ಮೃತ ಬೈಕ್ ಸವಾರರು. 

ಅಪರಿಚಿತ ವಾಹನ ಚಾಲಕ ಅಪಘಾತ ಮಾಡಿ ಸ್ಥಳದಲ್ಲಿ ತನ್ನ ವಾಹನವನ್ನು ನಿಲ್ಲಿಸದೆ ಎಸ್ಕೇಪ್ ಆಗಿದ್ದಾನೆ. 

ಈ ಬಗ್ಗೆ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 46/2026 ಕಲಂ 281, 106(1) ಬಿ.ಎನ್.ಎಸ್ ಮತ್ತು ಕಲಂ 134 ಸಹ ಕಲಂ 187 ಎಮ್.ವಿ ಆಕ್ಟ್ ನೇದ್ದರಡಿಯಲ್ಲಿ ಕೇಸು ದಾಖಲಾಗಿದ್ದು ಇರುತ್ತದೆ.

Home add -Advt

Related Articles

Back to top button