Belagavi NewsBelgaum NewsKannada NewsKarnataka NewsLatest

*ಹಣ ತರಲು ಎಟಿಎಂಗೆ ಹೋದ ಮಹಿಳೆ ನಾಪತ್ತೆ*


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಖಾಸಬಾಗ ನಗರದ ಅಂಬೇಡ್ಕರ್ ಗಲ್ಲಿ ನಿವಾಸಿಯಾದ ಮಂಜುಳಾ ಪರಶುರಾಮ ಕೋಲಕಾರ ಎಂಬ ೨೭ ವರ್ಷದ ಮಹಿಳೆಯು ಫೆ ೨ ರಂದು ಬೆಳಿಗ್ಗೆ ೧೧ ಗಂಟೆಗೆ ಎಟಿಎಮ್ ನಿಂದ ಹಣ ತೆಗೆದುಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋದವಳು ವಾಪಾಸ್ ಮನೆಗೆ ಬಾರದೇ ಕಾಣೆಯಾಗಿದ್ದಾರೆ ಎಂದು ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಣೆಯಾದ ಮಹಿಳೆಯ ವಿವರ: ೫.೪ ಎತ್ತರವಿದ್ದು, ಉದ್ದ ಮುಖ, ಉದ್ದ ಮೂಗು, ಸಾಧಾರಣ ಮೈಕಟ್ಟು, ಎರಡು ಕೈಗಳ ಮೇಲೆ ಟ್ಯಾಟು, ಕನ್ನಡ ಮಾತನಾಡುತ್ತಾರೆ, ಕ್ರೀಮ್ ಬಣ್ಣದ ಚೂಡಿದಾರ ಧರಿಸಿರುತ್ತಾರೆ.

ಈ ಮಹಿಳೆ ಕಂಡಲ್ಲಿ ಬೆಳಗಾವಿ ನಗರ ಪೊಲೀಸ್ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: ೦೮೩೧೨೪೦೫೨೩೩ ಶಹಾಪುರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ:೦೮೩೧೨೪೦೫೨೪೪ ; ಪೊಲೀಸ್ ಇನ್ಸ್‌ಪೆಕ್ಟರ, ಶಹಾಪುರ ಪೊಲೀಸ ಠಾಣೆ ಮೊಬೈಲ್ ಸಂಖ್ಯೆ :೯೪೮೦೮೦೪೦೪೬ ಗೆ ಸಂಪರ್ಕಿಸಬಹುದಾಗಿದೆ.

Home add -Advt

Related Articles

Back to top button