Kannada NewsNationalPolitics

*ಹೆದ್ದಾರಿಯಲ್ಲೇ ಪ್ರಧಾನಿ ಮೋದಿಯವರ ವಿಮಾನ ಲ್ಯಾಂಡಿಂಗ್ ಯಶಸ್ವಿ*

ಪ್ರಗತಿವಾಹಿನಿ ಸುದ್ದಿ: ಅಸ್ಸಾಂನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾದ ‘ಎಮರ್ಜೆನ್ಸಿ ಲ್ಯಾಂಡಿಂಗ್ ಫೆಸಿಲಿಟಿ’ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿಮಾನ ಯಶಸ್ವಿಯಾಗಿ ಇಳಿಯುವ ಮೂಲಕ ಇತಿಹಾಸ ನಿರ್ಮಿಸಿದೆ.

ಯುದ್ಧ ಅಥವಾ ತುರ್ತು ಪರಿಸ್ಥಿತಿಯ ಸಮಯದಲ್ಲಿ ವಾಯುಪಡೆಯ ವಿಮಾನಗಳು ಸುಲಭವಾಗಿ ಇಳಿಯಲು ಅನುಕೂಲವಾಗುವಂತೆ ರಾಷ್ಟ್ರೀಯ ಹೆದ್ದಾರಿಗಳನ್ನೇ ರನ್‌ವೇಗಳಾಗಿ ಪರಿವರ್ತಿಸಲಾಗುತ್ತದೆ. ಅಸ್ಸಾಂನಲ್ಲಿ ಇಂತಹ ವ್ಯವಸ್ಥೆಯನ್ನು ಪ್ರಧಾನಿ ಮೋದಿಯವರು ಇಂದು ಉದ್ಘಾಟಿಸಿದ್ದು ಮಾತ್ರವಲ್ಲದೆ, ತಾವೇ ಅದರಲ್ಲಿ ಇಳಿಯುವ ಮೂಲಕ ಅದರ ದಕ್ಷತೆಯನ್ನು ಜಗತ್ತಿಗೆ ಸಾರಿದ್ದಾರೆ.

Home add -Advt

ಈ ಐತಿಹಾಸಿಕ ಲ್ಯಾಂಡಿಂಗ್ ನಂತರ ಮಾತನಾಡಿದ ಪ್ರಧಾನಿ, “ಈ ಯೋಜನೆಯು ಈಶಾನ್ಯ ಭಾರತದ ಬದಲಾಗುತ್ತಿರುವ ಚಿತ್ರಣಕ್ಕೆ ಮತ್ತು ಭಾರತದ ಬಲಿಷ್ಠ ಮೂಲಸೌಕರ್ಯಕ್ಕೆ ದ್ಯೋತಕವಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದರು. ನಂತರ ಪ್ರಧಾನಿಯವರು ವೀಕ್ಷಣಾ ಗ್ಯಾಲರಿಯಿಂದ ಸುಮಾರು 40 ನಿಮಿಷಗಳ ಕಾಲ ನಡೆದ ರೋಚಕ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಿದರು. ಭಾರತದ ಅತ್ಯಾಧುನಿಕ ರಫೇಲ್ ಮತ್ತು ಸುಖೋಯ್-30 MKI ಯುದ್ಧ ವಿಮಾನಗಳು ಹೆದ್ದಾರಿಯಲ್ಲಿ ಹಾರಾಟ ನಡೆಸುವ ಮೂಲಕ ರಕ್ಷಣಾ ಸಾಮರ್ಥ್ಯವನ್ನು ಪ್ರದರ್ಶಿಸಿದವು.

Related Articles

Back to top button