Kannada NewsKarnataka News

ರಾಜಕೀಯದ ಮೂಲಕ ಸಮಾಜ ಸೇವೆ; ಮೃಧು, ಸರಳ ವ್ಯಕ್ತಿತ್ವದ ಮಹಾಂತೇಶ ಕವಟಗಿಮಠ

ರಾಜಕಾರಣ ಇರುವುದು ಸಮಾಜ ಸೇವೆ ಮಾಡುವುದಕ್ಕೋಸ್ಕರ. ಸಿಕ್ಕಿರುವ ಅವಕಾಶವನ್ನು ಸಮಾಜದ ಶ್ರೇಯೋಭಿವೃದ್ಧಿಗೆ ಬಳಸಬೇಕೆನ್ನುವ ಧ್ಯೇಯದೊಂದಿಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸರಳ, ಮೃಧು ಸ್ವಭಾವದ ರಾಜಕಾರಣಿ, ಕರ್ನಾಟಕ ವಿಧಾನ ಪರಿಷತ್ತಿನ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ.

ಗುರುವಾರ ಅವರ 54ನೇ ಜನ್ಮದಿನ. ತನ್ನಿಮಿತ್ತ ಈ ಲೇಖನ.

     ಚಿಕ್ಕೋಡಿಯ ಪ್ರತಿಷ್ಠಿತ ಕುಟುಂಬದಲ್ಲಿ ಹುಟ್ಟಿ, ಕುಟುಂಬದ ಹಿನ್ನೆಲೆಗಿಂತ ಸ್ವಂತ ವ್ಯಕ್ತಿತ್ವದ ಮೇಲೆಯೇ ರಾಜಕೀಯದಲ್ಲಿ ಎತ್ತರಕ್ಕೇರುತ್ತಿರುವ ಸರಳ, ಮೃಧು ಸ್ವಭಾವದ ವ್ಯಕ್ತಿ ಮಹಾಂತೇಶ ಕವಟಗಿಮಠ.

ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಅವರ ಬಲಗೈಯಂತೆ ನಿಂತು, ಅವರ ಹಾದಿಯಲ್ಲೇ ಮುನ್ನಡೆಯುತ್ತಿರುವ ಕವಟಗಿಮಠ, ಕೋರೆ ಅವರ ಪ್ರತಿ ಹೆಜ್ಜೆಯಲ್ಲೂ ಬೆಂಬಲವಾಗಿ ನಿಂತುಕೊಂಡಿರುತ್ತಾರೆ.

 ಸದಾ ಹಸನ್ಮುಖಿಯಾಗಿ, ಸಹನೆಯ ಪ್ರತೀಕದಂತಿರುವ ಕವಟಗಿಮಠ, ದೊಡ್ಡ ಹುದ್ದೆಯಲ್ಲಿದ್ದರೂ ಎಂದೂ ಹಮ್ಮು, ಬಿಮ್ಮು ತೋರಿಸದೆ, ಜನಸಾಮಾನ್ಯರನ್ನೂ ಪ್ರೀತಿಯಿಂದ ಮಾತನಾಡಿಸುತ್ತಾರೆ. 

ಕವಟಗಿಮಠ ಕುಟುಂಬ ಚಿಕ್ಕೋಡಿಯಲ್ಲಿ ಅತ್ಯಂತ ಚಿರಪರಿಚಿತ ಕುಟುಂಬ. ಮಹಾಂತೇಶ ಅವರ ಅಜ್ಜ ಕಲ್ಲಯ್ಯ ಸ್ವಾಮಿ ಕವಟಗಿಮಠ ಅವರ ಕಾಲದಿಂದಲೂ ರಾಜಕೀಯದಲ್ಲಿ ಮುಂಚೂಣಿಯಲ್ಲಿ ಇದ್ದವರು. ತಂದೆ ಮಲ್ಲಯ್ಯ ಸ್ವಾಮಿಯವರಂತು ಚಿಕ್ಕೋಡಿಯ ಭಾಗದಲ್ಲಿ ಕುಟುಂಬದ ಹಿರಿಯರಂತೆ ಬದುಕಿದವರು. ರಾಜಕೀಯವನ್ನು ಎಂದೂ ಸ್ವಾರ್ಥಕ್ಕಾಗಿ ಬಳಸದೆ, ಸಾಮಾಜಿಕ ಸೇವೆಗೆ ಇರುವ ಅವಕಾಶ ಎನ್ನುವಂತೆ ನಡೆದುಕೊಂಡು ಬಂದ ಕುಟುಂಬವದು.

  ಮಹಾಂತೇಶ ಕವಟಗಿಮಠ ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದಿದ್ದರೂ ತಾವು ಬೆಳೆಯುವುದಕ್ಕೆ ಅದನ್ನು ಏಣಿಯಾಗಿ ಬಳಸಿಕೊಂಡವರಲ್ಲ. ತಮ್ಮ ಪರಿಶ್ರಮ, ಸರಳತೆಗಳಿಂದಲೇ ಬೆಳೆಯುತ್ತಿರುವವರು. ಅಧಿಕಾರವನ್ನು ಬೆನ್ನತ್ತಿ ಹೋಗಬಾರದು. ಅದಾಗಿಯೇ ಹುಡುಕಿಕೊಂಡು ಬರಬೇಕು ಎನ್ನುವ ಹಿರಿಯರ ಮಾತನ್ನು ನೆಚ್ಚಿಕೊಂಡಿದ್ದಾರೆ.

ಜೊತೆಗೆ, ರಾಜ್ಯಸಭಾ ಸದಸ್ಯ, ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ಚೇರಮನ್ ಡಾ.ಪ್ರಭಾಕರ ಕೋರೆಯವರ ನೆರಳಿನಲ್ಲೇ, ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಮುನ್ನಡೆಯುತ್ತಿದ್ದಾರೆ. 

ತಾವು ಪ್ರತಿನಿಧಿಸುವ ವಿಧಾನ ಪರಿಷತ್ ಸ್ಥಾನಕ್ಕೆ ನ್ಯಾಯ ಒದಗಿಸುವಲ್ಲಿ ಕವಟಗಿಮಠ ನಿರಂತರ ಪ್ರಯತ್ನಯಲ್ಲಿ ತೊಡಗಿದ್ದಾರೆ. ಪಂಚಾಯಿತಿ ರಾಜ್ ವ್ಯವಸ್ಥೆ ಸುಧಾರಣೆಗೆ ಹತ್ತು ಹಲವು  ಆಲೋಚನೆಗಳನ್ನು ಹೊಂದಿರುವ ಅವರು ಸರಕಾರಕ್ಕೆ ಈ ಕುರಿತು ಸರಕಾರಕ್ಕೆ  ಸಲಹೆಗಳನ್ನು ನೀಡಿದ್ದಾರೆ.

 ಪಂಚಾಯತ ವ್ಯವಸ್ಥೆ ಸಶಕ್ತವಾಗಬೇಕು. ಎಲ್ಲ ನಿರ್ಧಾರಗಳೂ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಆಗಬೇಕು. ಆಗ ನಿಜವಾದ ವಿಕೇಂದ್ರೀಕರಣ ಆದಂತಾಗುತ್ತದೆ, ನಿಜವಾದ ಅಭಿವೃದ್ಧಿಯ ಪರ್ವ ಆರಂಭವಾಗುತ್ತದೆ ಎಂದು ನಂಬಿದವರು, ಅದನ್ನೇ ಪ್ರತಿಪಾದಿಸುತ್ತಿರುವವರು ಕವಟಗಿಮಠ. ತಮ್ಮ ಹೋರಾಟದಿಂದಲೇ ಪಂಚಾಯತ ರಾಜ್ಯ ಸಂಸ್ಥೆಗಳಿಗೆ ಸರಕಾರ ಹೆಚ್ಚಿನ ಅನುದಾನ ನೀಡುವಂತೆ ಮಾಡಿದ್ದಾರೆ. ಪಂಚಾಯತ ರಾಜ್ಯ ಸಂಸ್ಥೆಯ ಎಲ್ಲ ಪ್ರತಿನಿಧಿಗಳನ್ನು ಒಗ್ಗೂಡಿಸಿ, ಅವುಗಳ ಬಲವೃದ್ಧಿಗೆ ಸರಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಮುಂದುವರಿಸಿದ್ದಾರೆ.

ಉತ್ತರ ಕರ್ನಾಟಕದ ನೀರಾವರಿ ವಿಷಯದಲ್ಲೂ ಅವರು ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ ವಿಷಯದಲ್ಲಿ ಹಲವಾರು ಸಲಹೆಗಳನ್ನು ಸರಕಾರಕ್ಕೆ ನೀಡಿದ್ದಾರೆ.

ತಮ್ಮ ವ್ಯಕ್ತಿತ್ವದಿಂದಾಗಿಯೇ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಹುದ್ದೆಯಂತಹ ಪ್ರಮುಖ ಸ್ಥಾನವನ್ನು ಪಡೆದಿರುವ ಮಹಾಂತೇಶ ಕವಟಗಿಮಠ ಅವರು 54ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ-

ರಾಜಕೀಯದಲ್ಲೂ ಸುಸಂಸ್ಕೃತ ನಡೆ –ಮಹಾಂತೇಶ ಕವಟಗಿಮಠ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button