Kannada NewsLatestNational

*ಮುಟ್ಟಿನ ರಜೆ ಜಾರಿಗೆ ಬಂದ್ರೆ ಕಂಪನಿಗಳು ಮಹಿಳೆಯರನ್ನು ನೇಮಿಸಲು ಹಿಂದೇಟು ಹಾಕುತ್ತಾರೆ: ಸುಪ್ರೀಂ ಕೋರ್ಟ್*

ಪ್ರಗತಿವಾಹಿನಿ ಸುದ್ದಿ: ಮುಟ್ಟಿನ ರಜೆಯನ್ನು ಕಾನೂನುಬದ್ಧವಾಗಿ ಕಡ್ಡಾಯಗೊಳಿಸಿದರೆ, ಖಾಸಗಿ ಕಂಪನಿಗಳು ಸೇರಿದಂತೆ ಹಲವು ಉದ್ಯೋಗದಾತರು ಮಹಿಳೆಯರನ್ನು ನೇಮಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ಕುರಿತು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅಭಿಪ್ರಾಯಪಟ್ಟಿದ್ದಾರೆ. ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಈ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಇಂತಹ ಕಾನೂನು ‘ದುಡಿಯುವ ಮಹಿಳೆಯರಲ್ಲಿ ಮಾನಸಿಕ ಭಯ ಅಥವಾ ಪ್ರಭಾವವನ್ನು ಉಂಟುಮಾಡುತ್ತದೆ. ಅವರು ಪುರುಷರಿಗಿಂತ ‘ಕಡಿಮೆ’ ಎಂಬ ಭಾವನೆಯನ್ನು ಉಂಟುಮಾಡುತ್ತದೆ’ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಅವರು ಮುಟ್ಟಿನ ರಜೆ ನಿಯಮಗಳನ್ನು ರೂಪಿಸಲು ರಾಜ್ಯಗಳಿಗೆ ನಿರ್ದೇಶನ ಕೋರಿ ಸಲ್ಲಿಸಿದ ಅರ್ಜಿಯನ್ನು ಇಂದು ಬೆಳಿಗ್ಗೆ ನ್ಯಾಯಾಲಯವು ಕೈಗೆತ್ತಿಕೊಂಡಾಗ ಸಿಜೆಐ ಈ ಅಭಿಪ್ರಾಯಪಟ್ಟರು.

Home add -Advt

ಮುಟ್ಟು ಎನ್ನುವುದು ಕೆಟ್ಟ ವಿಷಯ ಎಂಬ ಭಾವನೆ ಉದ್ಯೋಗದಾತರಲ್ಲಿ ಬೆಳೆಯಲು ಇದು ಕಾರಣವಾಗಬಹುದು. ಉದ್ಯೋಗದಾತರ ಮನಸ್ಥಿತಿ ನಿಮಗೆ ಗೊತ್ತಿಲ್ಲ, ಈ ರೀತಿ ಕಾನೂನು ಬಂದರೆ ಅವರು ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಳ್ಳುವುದನ್ನೇ ನಿಲ್ಲಿಸುತ್ತಾರೆ ಎಂದು ಕೋರ್ಟ್‌ ಅರ್ಜಿದಾರರಿಗೆ ಎಚ್ಚರಿಕೆ ನೀಡಿತು. ಅರಿವು ಮೂಡಿಸುವುದು ಬೇರೆ, ಕಾನೂನಿನ ಮೂಲಕ ಒತ್ತಾಯ ಹೇರುವುದು ಬೇರೆ ಎಂದು ಕೋರ್ಟ್ ಸ್ಪಷ್ಟಪಡಿಸಿತು.

ಸುಪ್ರೀಂ ಕೋರ್ಟ್ ಮಹಿಳೆಯರಿಗೆ, ಅದು ವಿದ್ಯಾರ್ಥಿನಿಯರಾಗಿರಲಿ ಅಥವಾ ಕೆಲಸ ಮಾಡುವ ವೃತ್ತಿಪರರಾಗಿರಲಿ, ಮುಟ್ಟಿನ ಸಮಯದಲ್ಲಿ ರಜೆ ನೀಡುವುದನ್ನು ಕಡ್ಡಾಯ ಮಾಡಬೇಕು ಎಂದು ಅರ್ಜಿದಾರರು ಬಯಸಿದ್ದರು. ಆದರೆ ಅಂತಹ ಅರ್ಜಿಗಳನ್ನು “ಭಯವನ್ನು ಸೃಷ್ಟಿಸಲು ಮಾಡಲಾಗಿದೆ.’ ಎಂದು ಮುಖ್ಯ ನ್ಯಾಯಾಧೀಶರು ಹೇಳಿದ್ದಾರೆ.

Related Articles

Back to top button